ಕರ್ನಾಟಕ

karnataka

ETV Bharat / state

ಪಕ್ಷಾಂತರಿಗಳಿಗೆ ತಕ್ಕಶಾಸ್ತಿಯಾಗಿದೆ : ಮಾಜಿ ಸಚಿವ ಬಸವರಾಜ ರಾಯರೆಡ್ಡಿ - ಬಸವರಾಜ ರಾಯರೆಡ್ಡಿ ಸುದ್ದಿ

ಹಾಲಪ್ಪ ಆಚಾರ್ ನಮ್ಮ ಪ್ರಾಡಕ್ಟ್. ನಮ್ಮ ಗ್ರಾನೈಟ್ ಎಕ್ಸ್ ಫೋರ್ಟ್ ಆಗ್ತಿದೆ ಅಂದ್ರೆ ನಾನು ಖುಷಿ ಪಡುತ್ತೇನೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

Ex minister Basavaraj rayareddy
ಬಸವರಾಜ ರಾಯರೆಡ್ಡಿ

By

Published : Jan 31, 2020, 7:52 PM IST

ಕೊಪ್ಪಳ :ಪಕ್ಷಾಂತರಿಗಳಿಗೆ ತಕ್ಕ ಶಾಸ್ತಿಯಾಗಿದೆ. ಅವರಿಗೆ ಇನ್ನೂ ಆಗಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಯಲಬುರ್ಗಾದಲ್ಲಿ‌ ಮಾತನಾಡಿದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ

ಜಿಲ್ಲೆಯ ಯಲಬುರ್ಗಾದಲ್ಲಿ‌ ಮಾತನಾಡಿದ ಅವರು, ಇದ್ದ ಪಕ್ಷ ಬಿಟ್ಟು ಆ ಪಕ್ಷಕ್ಕೆ ದ್ರೋಹ ಮಾಡಿದ್ದು ಅವರ ತಪ್ಪು. ಬಿಜೆಪಿ‌ ಅತ್ಯಂತ ನಿಷ್ಠಾವಂತ ಪಕ್ಷ ಎಂದು ಹೇಳ್ತಾರೆ. ಆದರೆ, ಪಕ್ಷಾಂತರ ಪಿಡುಗನ್ನು ಅದು ಬೆಂಬಲಿಸಿದೆ. ಭ್ರಷ್ಟಾಚಾರ ಮಾಡಿದ್ದು ಸರಿನಾ ಎಂದು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಇನ್ನು ಯಲಬುರ್ಗಾ ಬಿಜೆಪಿ ಶಾಸಕ ಹಾಲಪ್ಪ ಆಚಾರ್​ಗೆ ಸಚಿವ ಸ್ಥಾನ ಸಿಗುವ ವಿಚಾರ ಕುರಿತಂತೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಹಾಲಪ್ಪ ಆಚಾರ್ ನಮ್ಮ ಪ್ರಾಡಕ್ಟ್. ನಮ್ಮ ಗ್ರಾನೈಟ್ ಎಕ್ಸ್​ಫೋರ್ಟ್ ಆಗ್ತಿದೆ ಅಂದ್ರೆ ನಾನು ಖುಷಿ ಪಡುತ್ತೇನೆ. ಇದು ವೈಯಕ್ತಿಕ ಜಗಳವಲ್ಲ. ಹಾಲಪ್ಪ ಈಸ್ ಮೈ ಪ್ರಾಡಕ್ಟ್. ಹಾಲಪ್ಪನ ಕ್ವಾಲಿಟಿ ಚೆನ್ನಾಗಿರೋದಕ್ಕೆ ಕಾರಣ ರಾಯರೆಡ್ಡಿ‌‌. ನಮ್ಮದು ಲೀಡರ್​ಶಿಪ್ ತಯಾರು ಮಾಡುವ ಫ್ಯಾಕ್ಟರಿ. ಬಹಳಷ್ಟು ಜನ ಲೀಡರ್​ಗಳು ತಯಾರಾಗಿ ಬಿಟ್ಟು ಹೋಗ್ತಾರೆ. ನಮ್ಮ ಫ್ಯಾಕ್ಟರಿಯಲ್ಲಿ ತಯಾರಾದ ವಸ್ತು ಒಳ್ಳೆಯ ಗುಣಮಟ್ಟದ್ದಾಗಿರುತ್ತದೆ. ನಮ್ಮವರು ಸಚಿವರಾದರೆ ಒಳ್ಳೆಯದು ಎಂದು ಹೇಳಿದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಯಲಬುರ್ಗಾ ಕ್ಷೇತ್ರಕ್ಕೆ ಸಚಿವ ಸ್ಥಾನ ಕೊಟ್ಟರೆ ಒಳ್ಳೆಯದು ಎಂದರು.

ABOUT THE AUTHOR

...view details