ಕುಷ್ಟಗಿ :ತಾಲೂಕಿನ ಕ್ಯಾದಿಗುಪ್ಪ ಗ್ರಾಮದ ಯುವಕನಿಗೆ ಕೊರೊನಾ ಸೋಂಕು ದೃಢವಾಗಿದ್ದು, ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕ್ಯಾದಿಗುಪ್ಪದ ಯುವಕನಿಗೆ ಕೊರೊನಾ
ಮಂಗಳೂರನಿಂದ ಬಂದಿದ್ದ ಈತ ಅನಾರೋಗ್ಯದ ಹಿನ್ನೆಲೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದ..
ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪದ ಯುವಕನಿಗೆ ಕೊರೊನಾ
ಮಂಗಳೂರನಿಂದ ಬಂದಿದ್ದ ಈತ ಅನಾರೋಗ್ಯದ ಹಿನ್ನೆಲೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದ. ಭಾನುವಾರ ಯುವಕನಿಗೆ ಸೋಂಕಿನ ಲಕ್ಷಣ ಕಾಣಿಸಿದ್ದು, ಯುವಕನ್ನು ಯಲಬುರ್ಗಾ ತಾಲೂಕಿನ ತಳಕಲ್ ವಿಶೇಷ ಕೋವಿಡ್-19 ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.
ಗ್ರಾಮದಲ್ಲಿ ಪಿಡಿಒ ಪ್ರಶಾಂತ ಹಿರೇಮಠ ನೇತೃತ್ವದಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ.