ಕೊಪ್ಪಳ: ದೇಶದಲ್ಲಿಯೇ ಕಾಂಗ್ರೆಸ್ ಎಕ್ಸ್ಫೈರ್ ಆಗಿದೆ. ಇನ್ನು ಕರ್ನಾಟಕದ ಜನರಿಗೆ ಗ್ಯಾರೆಂಟಿ ಎಲ್ಲಿಂದ ಕೊಡ್ತಾರೆ. ಎಕ್ಸ್ಫೈರ್ ಕಾಂಗ್ರೆಸ್ ಕೈ ಬಿಡಿ, ಬಿಜೆಪಿಗೆ ಮತ ನೀಡಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮನವಿ ಮಾಡಿದರು.
ಕೊಪ್ಪಳದ ಭಾಗ್ಯನಗರದಲ್ಲಿಂದು ಹಮ್ಮಿಕೊಂಡಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಜನರಿಗೆ ನರೇಂದ್ರ ಮೋದಿ ಸಿಕ್ಕಿರುವುದು ನಮ್ಮ ಅದೃಷ್ಟ. ಸದ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಏನು ಮಾಡುತ್ತೇವೆ ಎನ್ನುತ್ತಿದ್ದಾರೆ, ಅದೆಲ್ಲವನ್ನು ಬಿಜೆಪಿ ಸರ್ಕಾರ ಜನರಿಗೆ ನೀಡಿದೆ. ಪಂಪ್ಸೆಟ್ಗೆ ವಿದ್ಯುತ್, ಡಿಸೇಲ್ ಸಬ್ಸಿಡಿ ನೀಡಿದೆ. ಇದೆಲ್ಲವನ್ನೂ ಕಾಂಗ್ರೆಸ್ ತನ್ನ ಯೋಜನೆಗಳಲ್ಲಿ ಕಾಪಿ ಮಾಡುತ್ತಿದೆ. ಅದನ್ನು ಸರಿಯಾಗಿ ಮಾಡದೆ ನಗೆಪಾಟಲಿಗೆ ಈಡಾಗುತ್ತಿದೆ ಎಂದು ವ್ಯಂಗ್ಯವಾಗಿ ಟೀಕಿಸಿದರು.
ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡುವುದಾಗಿ ಹೇಳುತ್ತಾರೆ. ಆದರೆ ನಮ್ಮ ಸರ್ಕಾರ ಈಗಾಗಲೇ ಸಾವಿರಾರು ಕೋಟಿ ರೂ. ನೀಡಿದೆ. ಕೈ ನೇತಾರ ಕನ್ಫ್ಯೂಸ್ಡ್ ಗಿರಾಕಿ. ಕಾಂಗ್ರೆಸ್ದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಅವರಿಗೆ ತಮ್ಮ ಗ್ಯಾರಂಟಿ ಬಗ್ಗೆ ಗೊತ್ತಿಲ್ಲ. ಜೀನ್ಸ್ ಪಾರ್ಕ್, ಎರಡು ಸಾವಿರ ರೂ. ಭತ್ಯೆ ಅಂತಾರೆ. ಆದರೆ ಹಿಂದಿನಿಂದ ಅವರ ಕಾರ್ಯಕರ್ತರು ಐದು ಸಾವಿರ ಅಂತಾರೆ. ಆದರೆ, ಬಿಜೆಪಿ ಹಾಗಲ್ಲ ನಾವು ಅಧಿಕಾರಕ್ಕೆ ಬರುವ ಮುನ್ನ ಜನರಿಗೆ ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಿದ್ದೇವೆ ಎಂದು ಹೇಳಿದರು.
ಮತದಾರರು ಡಿಕೆಶಿ ಸಿದ್ದರಾಮಯ್ಯನ ಮನೆಗೆ ಕಳಿಸ್ತಾರೆ:2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಸಿದ್ದರಾಮಯ್ಯ, ಡಿಕೆಶಿ ಅವರನ್ನು ರಾಜ್ಯದ ಜನ ಮನೆಗೆ ಕಳಿಸುತ್ತಾರೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಕರ್ನಾಟಕಕ್ಕೆ ಎಷ್ಟು ಅನುದಾನ ನೀಡಿದೆ ? ಕಾಂಗ್ರೆಸ್ನವರು ಹೇಳಲಿ. ಮೋದಿ ಅವರು ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದಾರೆ. ಅದು 2.56 ಲಕ್ಷ ಕೋಟಿ ನೀಡಿದ್ದೇವೆ. ಕಾಂಗ್ರೆಸ್ ಗಿಂತ ಎರಡು ಪಟ್ಟುಹೆಚ್ಚು ಅನುದಾನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.