ಕರ್ನಾಟಕ

karnataka

ಸಿಎಎ ಪರ ವಿವರಿಸಲು ಬಂದ ಬಿಜೆಪಿ ಮುಖಂಡರ ಮೇಲೆ ಹಲ್ಲೆಯ ಆರೋಪ

ಪೌರತ್ವ ಕಾಯ್ದೆ ಪರ ಅರಿವು ಮೂಡಿಸಲು ಮನೆ-ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದ ಬಿಜೆಪಿ ಮುಖಂಡರ ಮೇಲೆ ನೂರಾರು ಮುಸ್ಲಿಂ ಯುವಕರು ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಿಲ್ಲಾ ಪ್ರದೇಶದ 5ನೇ ವಾರ್ಡ್​ನ ಈದ್ಗಾ ಕಾಲೋನಿ ಸಮೀಪದ ಸಮುದಾಯ ಭವನದ ಬಳಿ ಪೌರತ್ವ ಕಾಯ್ದೆ ಬಗ್ಗೆ ಬಿಜೆಪಿ ಮುಖಂಡರು ಪ್ರಚಾರ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.

By

Published : Jan 12, 2020, 12:50 AM IST

Published : Jan 12, 2020, 12:50 AM IST

CAA campaign by BJP activists: Muslim youths tried attacking them
ಬಿಜೆಪಿಗರಿಂದ ಪೌರತ್ವ ಕಾಯ್ದೆ ಪ್ರಚಾರ: ದಾಳಿಗೆ ಯತ್ನಿಸಿದ ಮುಸ್ಲಿಂ ಯುವಕರು

ಗಂಗಾವತಿ: ಪೌರತ್ವ ಕಾಯ್ದೆ ಪರ ಅರಿವು ಮೂಡಿಸಲು ಮನೆ-ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದ ಬಿಜೆಪಿ ಮುಖಂಡರ ಮೇಲೆ ನೂರಾರು ಮುಸ್ಲಿಂ ಯುವಕರು ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗಂಗಾವತಿಯಲ್ಲಿ ಪೌರತ್ವ ಕಾಯ್ದೆ ಪರ ಪ್ರಚಾರದ ವೇಳೆ ನಡೆದ ಬಿಜೆಪಿ- ಮುಸ್ಲಿಮರ ನಡುವಿನ ಪರಸ್ಪರ ನೂಕಾಟ

ನಗರದ ‌ಕಿಲ್ಲಾ ಪ್ರದೇಶದ 5ನೇ ವಾರ್ಡ್​ನ ಈದ್ಗಾ ಕಾಲೋನಿ ಸಮೀಪದ ಸಮುದಾಯ ಭವನದ ಬಳಿ ಪೌರತ್ವ ಕಾಯ್ದೆ ಬಗ್ಗೆ ಬಿಜೆಪಿ ಮುಖಂಡರು ಪ್ರಚಾರ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ‌ ಬಹುತೇಕ ಮುಸ್ಲಿಮರು ಹೆಚ್ಚಾಗಿದ್ದಾರೆ .
ಪಾಂಡು ಎಂಬ ಬಿಜೆಪಿ ಮುಖಂಡ ಸ್ಥಳಿಯರ ವಿರೋಧದ‌ ನಡುವೆಯೂ ಸಿಎಎ ಹಾಗೂ ಎನ್​ಆರ್​ಸಿ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸಿದರು ಎನ್ನಲಾಗಿದ್ದು, ಇದರಿಂದಾಗಿಯೇ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಪರಸ್ಪರ ತಳ್ಳಾಟ ನಡೆಸುತ್ತಿರುವ ದೃಶ್ಯಾವಳಿಗಳು ವಿಡಿಯೋದಲ್ಲಿ ಸೆರೆಯಾಗಿವೆ.

ಮಾಹಿತಿ ತಿಳಿದ ಕೂಡಲೆ ಇನ್ನೂ ಕೆಲ ಬಿಜೆಪಿ ಮುಖಂಡರು ಸ್ಥಳಕ್ಕೆ ಆಗಮಿಸಿದರು. ಇದರಿಂದ ಕೆರಳಿದ ಸುಮಾರು ನೂರಾರು ಯುವಕರು ಬಿಜೆಪಿ ಮುಖಂಡರಿದ್ದ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಿಜೆಪಿ ಮುಖಂಡರನ್ನು ಅಲ್ಲಿಂದ ಕಳಿಸಿದರು. ನೆರದವರಲ್ಲಿ ಕೆಲವರು ಯುವಕರು ಪೌರತ್ವ ಕಾಯ್ದೆ, ಬಿಜೆಪಿ, ಮೋದಿ ಹಾಗೂ ಸಂಘ ಪರಿವಾರದ ವಿರುದ್ಧ ಘೋಷಣೆ ಕೂಗಿದರು.

ABOUT THE AUTHOR

...view details