ಕರ್ನಾಟಕ

karnataka

ETV Bharat / state

ಮಳೆಯಿಂದ ಹದವಾದ ಭೂಮಿ, ಬಿತ್ತನೆ ಕಾರ್ಯದಲ್ಲಿ ಸಕ್ರಿಯನಾದ ಅನ್ನದಾತ

ಕಳೆದ ಮಂಗಳವಾರ, ಬುಧವಾರ ಉತ್ತಮ ಮಳೆಯಾಗಿದ್ದು, ರೈತ ಸಂಪರ್ಕ ಕೇಂದ್ರದಿಂದ ಬೀಜ ಪಡೆದಿರುವ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

By

Published : Jun 14, 2020, 7:47 AM IST

ಬಿತ್ತನೆ ಕಾರ್ಯದಲ್ಲಿ ಸಕ್ರೀಯನಾದ ಅನ್ನದಾತ
ಬಿತ್ತನೆ ಕಾರ್ಯದಲ್ಲಿ ಸಕ್ರೀಯನಾದ ಅನ್ನದಾತ

ಕುಷ್ಟಗಿ (ಕೊಪ್ಪಳ): ಕಳೆದ ನಾಲ್ಕೈದು ದಿನಗಳಿಂದ ಸುತ್ತಮುತ್ತಲಿನ ತಾಲೂಕಿನಲ್ಲಿ ಸುರಿದ ಮಳೆಗೆ ಭೂಮಿ ಹದವಾಗಿದ್ದು, ಅನ್ನದಾತರು ಬಿತ್ತನೆ ಕಾರ್ಯದಲ್ಲಿ ಸಕ್ರೀಯರಾಗಿದ್ದಾರೆ.

ತಾಲೂಕಿನಾದ್ಯಂತ ಒಟ್ಟು 67,575 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಗುರಿ ಹೊಂದಲಾಗಿದೆ. ಶೇ.30 ರಷ್ಟು ಬಿತ್ತನೆ ಪ್ರಗತಿಯಲ್ಲಿದೆ. ಈ ಬಾರಿ ಹೆಸರು ಬಿತ್ತನೆ ಪ್ರಮಾಣ ಹೆಚ್ಚಿದ್ದು, ನಿಗದಿತ 7,500 ಹೆಕ್ಟೇರ್ ಗುರಿಯಲ್ಲಿ 6,800 ಹೆಕ್ಟೇರ್ ಬಿತ್ತನೆಯಾಗಿದೆ‌.

ಬಿತ್ತನೆ ಕಾರ್ಯದಲ್ಲಿ ಸಕ್ರೀಯನಾದ ಅನ್ನದಾತ

ಓದಿ:ಒಂದು ಮಳೆಯಿಂದ ಹೆಸರಿಗೆ ಬಂತು ಜೀವ ಕಳೆ: ಉತ್ತಮ ಇಳುವರಿಯ ವಿಶ್ವಾಸ

ಕಳೆದ ಮಂಗಳವಾರ, ಬುಧವಾರ ಉತ್ತಮ ಮಳೆಯಾಗಿದ್ದು, ರೈತ ಸಂಪರ್ಕ ಕೇಂದ್ರದಿಂದ ಬೀಜ ಪಡೆದಿರುವ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ 2 ವರ್ಷದಿಂದ ರೋಹಿಣಿ ಮತ್ತು ಮೃಗಶಿರ ಮಳೆ ಸುರಿದಿರಲಿಲ್ಲ. ಪ್ರಸಕ್ತ ಅವಧಿಯಲ್ಲಿ ಉತ್ತಮ ಮಳೆಯಾಗಿದ್ದು, ಸಕಾಲದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ರೈತರು ಎಳ್ಳು, ಸೂರ್ಯಕಾಂತಿ, ತೊಗರಿ, ಮೆಕ್ಕೆಜೋಳ, ಸಜ್ಜೆ ಬಿತ್ತನೆ ಕೈಗೊಂಡಿದ್ದು, ಸೂರ್ಯಕಾಂತಿ, ತೊಗರಿ ಬಿತ್ತನೆಗೂ ಬಿತ್ತನೆ ಬೀಜ ಸಂಗ್ರಹಿಸಿದ್ದಾರೆ.

ಭರಣಿ, ಕೃತ್ತಿಕಾ ಮಳೆಗೆ ಸಜ್ಜೆ, ಎಳ್ಳು ಬಿತ್ತನೆ ಕೈಗೊಂಡದ್ದ ರೈತರು, ಅರೆ ಹಸಿ ಹಿನ್ನೆಲೆಯಲ್ಲಿ ಬಿತ್ತನೆ ಬೀಜ ನಾಟಿರಲಿಲ್ಲ ಈ ಹದವರಿತ ಮಳೆಗೆ ಮರು ಬಿತ್ತನೆಗೆ ಮುಂದಾಗಿರುವುದು ಕಂಡು ಬಂದಿದೆ.

ಕೃಷಿ ಇಲಾಖೆಯ ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ನಾಗನಗೌಡ ಪೊಲೀಸ್​ ಪಾಟೀಲ ಈಟಿವಿ ಭಾರತಪ್ರತಿನಿಧಿಯೊಂದಿಗೆ ಮಾತನಾಡಿ, ಜೂನ್ ಅಂತ್ಯ ಹಾಗೂ ಜುಲೈ ತಿಂಗಳು ಭರವಸೆಯ ಮುಂಗಾರು ಆಗಿದೆ. ಬಿತ್ತನೆ ಕ್ಷೇತ್ರ ವಿಸ್ತಾರಗೊಳ್ಳುವ ಸಾದ್ಯತೆಗಳಿದ್ದು, ಬಿತ್ತನೆ ಬೀಜದ ಕೊರತೆ ಇಲ್ಲ ಅಗತ್ಯ ದಾಸ್ತಾನು ಹೊಂದಲಾಗಿದೆ ಎಂದರು.

ABOUT THE AUTHOR

...view details