ಕರ್ನಾಟಕ

karnataka

ಪಂಪ್​ಸೆಟ್ ಅಳವಡಿಸಿ ನೀರು ಬಳಸಿಕೊಳ್ಳುವವರ ವಿರುದ್ಧ ಕ್ರಮ: ಸಚಿವ ರಮೇಶ್​ ಜಾರಕಿಹೊಳಿ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಗೆ ಪಂಪ್​ಸೆಟ್ ಅಳವಡಿಸಿ ನೀರು ಬಳಸಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಇಲಾಖೆ ಸಚಿವ ರಮೇಶ್​ ಜಾರಕಿಹೊಳಿ ತಿಳಿಸಿದ್ದಾರೆ.

By

Published : Aug 5, 2020, 10:40 PM IST

Published : Aug 5, 2020, 10:40 PM IST

Minister Ramesh Zarakiholi
ಸಚಿವ ರಮೇಶ್​ ಜಾರಕಿಹೊಳಿ

ಕೊಪ್ಪಳ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆಗೆ ಪಂಪ್​ಸೆಟ್ ಅಳವಡಿಸಿ ನೀರು ಬಳಸಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಇಲಾಖೆ ಸಚಿವ ರಮೇಶ್​ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.

ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಕಾನೂನು ವ್ಯಾಪ್ತಿ ಮೀರಿ ಹೊಲಗಳಿಗೆ ಪಂಪ್​ಸೆಟ್ ಮೂಲಕ ಕಾಲುವೆ ನೀರನ್ನು ಬಳಕೆ‌ ಮಾಡಿಕೊಳ್ಳುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಪಂಪ್​ಸೆಟ್​​​ಗಳನ್ನು ಅಳವಡಿಸಿಕೊಂಡು ಹರಿಯುತ್ತಿರುವ ಕಾಲುವೆ ನೀರನ್ನು ಜಮೀನಿಗೆ ಹೋಗುವಂತೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಹೀಗಾಗಿ ಕಾಲುವೆಗೆ ಪಂಪ್​ಸೆಟ್​ಗಳನ್ನು ಅಳವಡಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ.

ಈ ಕುರಿತು ಶೀಘ್ರವಾಗಿ ಉನ್ನತ ಮಟ್ಟದ ಸಭೆ ಕರೆಯುತ್ತೇನೆ. ಅಲ್ಲದೆ ರೈತರು ಕಾಲುವೆಗೆ ಅಳವಡಿಸಿರುವ ಪಂಪ್​ಸೆಟ್​ಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸಚಿವ ರಮೇಶ್​ ಜಾರಕಿಹೊಳಿ ಪ್ರಕಟಣೆ‌ ಮೂಲಕ ತಿಳಿಸಿದ್ದಾರೆ ಎಂದು ವಾರ್ತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

For All Latest Updates

ABOUT THE AUTHOR

...view details