ಕರ್ನಾಟಕ

karnataka

ಡಿಸೆಂಬರ್ 9 ರಂದು ಗಂಗಾವತಿಯಲ್ಲಿ ಬೃಹತ್ ಸಂಕೀರ್ತನಾ‌ ಯಾತ್ರೆ

ಹನುಮಮಾಲಾ ವಿಸರ್ಜನೆ ಹಿನ್ನೆಲೆ ಬರುವ ಡಿಸೆಂಬರ್ 9 ರಂದು ಗಂಗಾವತಿ ನಗರದಲ್ಲಿ ಬೃಹತ್ ಸಂಕೀರ್ತನಾ‌ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಮುಖಂಡ ಸೂರ್ಯ ನಾರಾಯಣ ಹೇಳಿದ್ದಾರೆ.

By

Published : Nov 22, 2019, 8:10 PM IST

Published : Nov 22, 2019, 8:10 PM IST

ಸೂರ್ಯ ನಾರಾಯಣ

ಕೊಪ್ಪಳ: ಹನುಮಮಾಲಾ ವಿಸರ್ಜನೆ ಹಿನ್ನೆಲೆ ಬರುವ ಡಿಸೆಂಬರ್ 9 ರಂದು ಗಂಗಾವತಿ ನಗರದಲ್ಲಿ ಬೃಹತ್ ಸಂಕೀರ್ತನಾ‌ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಮುಖಂಡ ಸೂರ್ಯ ನಾರಾಯಣ ಹೇಳಿದ್ದಾರೆ.

ಕೊಪ್ಪಳ ಸೂರ್ಯ ನಾರಾಯಣ ಸುದ್ದಿಗೋಷ್ಠಿ

ನಗರದ ಮೀಡಿಯಾ ಕ್ಲಬ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಹನುಮಭಕ್ತರು ಈಗಾಗಲೇ ಹನುಮಮಾಲಾ ಧರಿಸಿ ವೃತ ಕೈಗೊಂಡಿದ್ದಾರೆ. ಇನ್ನೂ ಅನೇಕ ಭಕ್ತರು ಮಾಲೆಯನ್ನು ಧರಿಸಿ ವೃತಾಚರಣೆ ಕೈಗೊಳ್ಳಲಿದ್ದಾರೆ. ಡಿಸೆಂಬರ್ 9 ರಂದು ಈ ವೃತ ಪೂರ್ಣಗೊಳ್ಳಲಿದೆ. ಮಾಲೆ ಧರಿಸಿದ ಮಾಲಾಧಾರಿಗಳು ಗಂಗಾವತಿ ತಾಲೂಕಿನ ಪೌರಾಣಿಕ ನೆಲೆಯಾದ ಅಂಜನಾದ್ರಿ ಬೆಟ್ಟಕ್ಕೆ ಬಂದು ಮಾಲೆಯನ್ನು ವಿಸರ್ಜಿಸಲಿದ್ದಾರೆ. ಈ ಬಾರಿ ಸುಮಾರು 16 ಸಾವಿರದಷ್ಟು ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸಲಿದ್ದಾರೆ ಎಂದರು.

ಡಿಸೆಂಬರ್ 9 ರಂದು ಬೆಳಗ್ಗೆ 8 ಗಂಟೆಗೆ ಗಂಗಾವತಿ ನಗರದಲ್ಲಿ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಅಂದು ಅಂಜನಾದ್ರಿಯಲ್ಲಿ ಪವಮಾನಹೋಮ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸಂಕೀರ್ತನಾ ಯಾತ್ರೆಯ ಬಳಿಕ ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ತೆರಳಿ ಮಾಲೆ ವಿಸರ್ಜಿಸಲಿದ್ದಾರೆ ಎಂದರು.

ಈ ವೇಳೆ ಭಜರಂಗದಳದ ಮುಖಂಡರಾದ ರಾಜು ಬಾಕಳೆ, ದೊಡ್ಡಬಸಯ್ಯ, ಸುಭಾಷ್ ಸಾದರ, ವಿನಯ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details