ಕರ್ನಾಟಕ

karnataka

ETV Bharat / state

ರಾಷ್ಟ್ರದ ಅಭಿವೃದ್ಧಿಗಾಗಿ ಆರ್ಥಿಕ ಗಣತಿ: ಡಿಸಿ ಜೆ.ಮಂಜುನಾಥ್

ಏಳನೇ ಆರ್ಥಿಕ ಗಣತಿಯನ್ನು ಇದೇ ಜನವರಿಯಿಂದ ಮಾಚ್೯ ತಿಂಗಳವರೆಗೆ ನಡೆಸುಲಾಗುತ್ತದೆ. ಆದ್ದರಿಂದ ಮನೆ ಮನೆಗೆ ನಮ್ಮ ಸಿಬ್ಬಂದಿ ಬಂದು ಮಾಹಿತಿ ಕಲೆ ಹಾಕುತ್ತಾರೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್  ತಿಳಿಸಿದರು.

By

Published : Jan 10, 2020, 10:33 AM IST

ಏಳನೇ ಆಥಿ೯ಕ ಗಣತಿ
ಏಳನೇ ಆಥಿ೯ಕ ಗಣತಿ

ಕೋಲಾರ: ಜಿಲ್ಲೆಯ ಏಳನೇ ಆರ್ಥಿಕ ಗಣತಿಯನ್ನು ಇದೇ ಜನವರಿಯಿಂದ ಮಾಚ್೯ ತಿಂಗಳವರೆಗೆ ನಡೆಸುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು.

ಜಿಲ್ಲಾಧಿಕಾರಿಗಳಿಂದ ಏಳನೇ ಆಥಿ೯ಕ ಗಣತಿ ಕುರಿತುಪತ್ರಿಕಾಗೋಷ್ಟಿ

ಕೋಲಾರ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಏಳನೇ ಆಥಿ೯ಕ ಗಣತಿಯನ್ನು ಜನವರಿಯಿಂದ ಮಾರ್ಚ್​​ ತಿಂಗಳವರೆಗೂ ನಡೆಸಲಾಗುತ್ತದೆ. ದೇಶದಲ್ಲಿ ಪ್ರತಿ ಐದು ವಷ೯ಕ್ಕೊಮ್ಮೆ ಆರ್ಥಿಕ ಗಣತಿಯನ್ನು ನಡೆಸಲಾಗುತ್ತಿದ್ದು, ಕೋಲಾರ ಜಿಲ್ಲೆಯಲ್ಲೂ ಸಹ ಏಳನೇ ಆರ್ಥಿಕ ಜನಗಣತಿಯನ್ನು ನಡೆಸುತ್ತಿದೇವೆ. ಅಲ್ಲದೆ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸಾವ೯ಜನಿಕ ಮತ್ತು ಖಾಸಗಿ ವಲಯದಲ್ಲಿ ಸಂಘಟಿತ ಹಾಗೂ ಅಸಂಘಟಿತ ವಿಭಾಗದಲ್ಲಿ, ಆಥಿ೯ಕ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳನ್ನು ಪಟ್ಟಿ ಮಾಡುವುದು ಈ ಆರ್ಥಿಕ ಗಣತಿಯ ಮೂಲ ಉದ್ದೇಶ ಎಂದು ತಿಳಿಸಿದರು.

ABOUT THE AUTHOR

...view details