ಕರ್ನಾಟಕ

karnataka

ಮೊಬೈಲ್ ಟವರ್‌ನಲ್ಲಿ ಸಿಲುಕಿಕೊಂಡಿದ್ದ ಹದ್ದಿನ ರಕ್ಷಣೆ

By

Published : Oct 31, 2022, 9:19 AM IST

Updated : Oct 31, 2022, 11:30 AM IST

ಮೊಬೈಲ್ ಟವರ್‌ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಸಿಲುಕಿಕೊಂಡಿದ್ದ ಹದ್ದನ್ನು ಪಕ್ಷಿ ಪ್ರೇಮಿಗಳು ರಕ್ಷಿಸಿದ್ದಾರೆ.

Rescue of an eagle stuck in a mobile tower
ಮೊಬೈಲ್ ಟವರ್‌ನಲ್ಲಿ ಸಿಲುಕಿಕೊಂಡಿದ್ದ ಹದ್ದಿನ ರಕ್ಷಣೆ

ಕೋಲಾರ: ಅನಾರೋಗ್ಯಕ್ಕೆ ತುತ್ತಾಗಿ ಮೊಬೈಲ್ ಟವರ್‌ನಲ್ಲಿ ಸಿಲುಕಿ ಪರದಾಡುತ್ತಿದ್ದ ರಣ ಹದ್ದನ್ನು ರಕ್ಷಣೆ ಮಾಡಲಾಗಿದೆ. ಕೋಲಾರದ ಗಾಂಧಿನಗರದಲ್ಲಿ ಹದ್ದಿನ ರಕ್ಷಣೆ ಮಾಡಿರುವ ಪ್ರಾಣಿಪ್ರಿಯ ಜೀವಿ ಆನಂದ್, ಮೊಬೈಲ್ ಟವರ್​ನಲ್ಲಿ ಸಿಲುಕಿಕೊಂಡು ಗಾಯಗೊಂಡಿದ್ದ ಹದ್ದನ್ನು ಟವರ್ ಮೇಲೆ ಹತ್ತಿ ಹಿಡಿದುಕೊಂಡು ನಂತರ ಅದಕ್ಕೆ ಚಿಕಿತ್ಸೆ ಕೊಡಿಸಿದ್ದಾರೆ.

ಮೊಬೈಲ್ ಟವರ್‌ನಲ್ಲಿ ಸಿಲುಕಿಕೊಂಡಿದ್ದ ಹದ್ದಿನ ರಕ್ಷಣೆ

ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಧಾವಿಸಿದ ಗಾಂಧಿನಗರದ ಪಕ್ಷಿ ಪ್ರೇಮಿಗಳಾದ ಜೀವಿ ಆನಂದ್ ಹಾಗೂ ತಂಡ ಹದ್ದನ್ನು ರಕ್ಷಣೆ ಮಾಡಿ ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಹದ್ದಿನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಪಕ್ಷಿ ಪ್ರೇಮಿಗಳ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಹದ್ದು ರಕ್ಷಣೆ ಮಾಡುವ ವೇಳೆ ನುರಾರು ಹದ್ದುಗಳು ಟವರ್ ಸುತ್ತ ಹಾರಾಟ ಮಾಡುತ್ತಿದ್ದವು ಇದರಿಂದ ಕೆಲಕಾಲ ದಾಳಿ ಮಾಡುವ ಆತಂಕ ಸೃಷ್ಟಿ ಯಾಗಿತ್ತು.

ಇದನ್ನೂ ಓದಿ :ಗಂಗಾವತಿ: ಆರ್ಹಾಳದಲ್ಲಿ ಬೋನಿಗೆ ಬಿದ್ದ ಗಂಡು ಚಿರತೆ

Last Updated : Oct 31, 2022, 11:30 AM IST

ABOUT THE AUTHOR

...view details