ETV Bharat / entertainment

ಬಂತು 'ಮಾರ್ಟಿನ್​​' ಟ್ರೇಲರ್! ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚಿದ ಧ್ರುವ ಸರ್ಜಾ​​​ - Martin Trailer - MARTIN TRAILER

ಎ.ಪಿ.ಅರ್ಜುನ್ ಸಾರಥ್ಯದ ಬಹುನಿರೀಕ್ಷಿತ 'ಮಾರ್ಟಿನ್​​' ಟ್ರೇಲರ್ ಅನಾವರಣಗೊಂಡಿದೆ. ಮುಂಬೈನಲ್ಲಿ ಇಂದು ಸಂಜೆ 5 ಗಂಟೆಗೆ ಅದ್ಧೂರಿ ಟ್ರೇಲರ್​ ಲಾಂಚ್​ ಈವೆಂಟ್​​​ ನಡೆಯಿತು.

Martin Poster
ಮಾರ್ಟಿನ್​​ ಪೋಸ್ಟರ್ (ETV Bharat)
author img

By ETV Bharat Karnataka Team

Published : Aug 5, 2024, 7:26 PM IST

Updated : Aug 5, 2024, 10:05 PM IST

ಇಂದಿನಿಂದ ಧ್ರುವ ಸರ್ಜಾ ಅಭಿಮಾನಿಗಳ ಕಾತರ ಮತ್ತಷ್ಟು ಹೆಚ್ಚಾಗಿದೆ. 2024ರ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ 'ಮಾರ್ಟಿನ್​​' ಚಿತ್ರದ ಟ್ರೇಲರ್ ಇಂದು ರಿಲೀಸ್ ಆಗಿರುವುದು ಇದಕ್ಕೆ ಕಾರಣ. ಭರ್ಜರಿ ಆ್ಯಕ್ಷನ್ ದೃಶ್ಯಗಳಲ್ಲಿ ಆ್ಯಕ್ಷನ್​ ಪ್ರಿನ್ಸ್​​ ಧ್ರುವ ಸರ್ಜಾ ಅಬ್ಬರಿಸಿದ್ದು, ಸಿನಿಮಾ ನೋಡುವ ಪ್ರೇಕ್ಷಕರ ನಿರೀಕ್ಷೆಗಳು ಗರಿಗೆದರಿವೆ.

ಎ.ಪಿ.ಅರ್ಜುನ್​ ಆ್ಯಕ್ಷನ್​ ಕಟ್​ ಹೇಳಿರುವ ಚಿತ್ರದ ಟ್ರೇಲರ್​ ಅದ್ಭುತವಾಗಿ ಮೂಡಿಬಂದಿದೆ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೈನವಿರೇಳಿಸುವ ಆ್ಯಕ್ಷನ್​ ಸೀನ್ಸ್​​, ಅದಕ್ಕೆ ತಕ್ಕ ಮ್ಯೂಸಿಕ್​​, ಆ್ಯಕ್ಷನ್​ ಪ್ರಿನ್ಸ್​ ಎಂಟ್ರಿ, ಡೈಲಾಗ್ಸ್, ಸದೃಢ ಮೈಕಟ್ಟು ನೋಡುಗರನ್ನು ಆಕರ್ಷಿಸಿದೆ. ಸಿನಿಮಾ ಅಕ್ಟೋಬರ್ 11ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ.

ಕನ್ನಡ ಚಿತ್ರರಂಗದಲ್ಲಿ ಸೂಪರ್​​ ಸ್ಟಾರ್ಸ್ ಮುಖ್ಯಭೂಮಿಕೆಯ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಅಲ್ಲದೇ ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆಯೂ ಇಳಿದಿದೆ ಎಂಬ ಮಾತುಗಳು ಕೆಲ ಸಮಯದಿಂದ ಕೇಳಿಬರುತ್ತಿವೆ. ಇಂಥ ಸಂದರ್ಭದಲ್ಲಿ ಧ್ರುವ ಸರ್ಜಾ ನಟನೆಯ ಮಾರ್ಟಿನ್, ಗೋಲ್ಡನ್​ ಸ್ಟಾರ್​ ಗಣೇಶ್​ ಅವರ ಕೃಷ್ಣಂ ಪ್ರಣಯ ಸಖಿ, ದುನಿಯಾ ವಿಜಯ್​​ ಅಭಿನಯದ ಭೀಮ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆ ಆಗಲು ಸಜ್ಜಾಗಿವೆ.

ಇದನ್ನೂ ಓದಿ: 'ನನ್ನ ಸಿನಿಮಾ ಯಶಸ್ಸಿನಲ್ಲಿ ಸಂಗೀತ ಮಹತ್ವದ ಪಾತ್ರ ವಹಿಸಿದೆ': ಗೋಲ್ಡನ್ ಸ್ಟಾರ್ ಗಣೇಶ್​​ - Krishnam Pranaya Sakhi

ಮಾರ್ಟಿನ್‌ ಚಿತ್ರದಲ್ಲಿ ವೈಭವಿ ಶಾಂಡಿಲ್ಯ, ಅನ್ವೇಶಿ ಜೈನ್‌, ನಿಕಿತನ್‌ ಧೀರ್‌ ಸೇರಿದಂತೆ ಹಲವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಉದಯ್ ಮೆಹ್ತಾ ಅವರ ಬಿಗ್​​ ಬಜೆಟ್​ ಚಿತ್ರವಿದು.

ಇದನ್ನೂ ಓದಿ: 'ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನನ್ನ ಕಣ್ಮುಂದೆ ನಡೆದ ಘಟನೆ': ನಿರ್ದೇಶಕ ಹೇಮಂತ್ ರಾವ್ - Director Hemanth Rao

ಮಣಿಶರ್ಮಾ ಅವರ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣ, ಮಹೇಶ್‌ರೆಡ್ಡಿ ಎಡಿಟಿಂಗ್​ ಚಿತ್ರಕ್ಕಿದೆ. ರವಿವರ್ಮಾ ಮತ್ತು ರಾಮ್‌ ಲಕ್ಷ್ಮಣ್‌ ಆ್ಯಕ್ಷನ್​​ ದೃಶ್ಯಗಳನ್ನು ನಿಭಾಯಿಸಿದ್ದಾರೆ.​​

Last Updated : Aug 5, 2024, 10:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.