ಕರ್ನಾಟಕ

karnataka

ಮನೆಯವರ ವಿರೋಧದ ನಡುವೆ ಹಾರಿಹೋದ ಲವ್​ ಬರ್ಡ್ಸ್​​: ಜೀವಭಯದಿಂದ ವಿಡಿಯೋ ಹರಿಬಿಟ್ಟ ಜೋಡಿ! ​

ಪ್ರೀತಿಸಿ ಮದುವೆಯಾದ ಪ್ರೇಮಿಗಳು ಇದೀಗ ತಮಗೆ ಜೀವಭಯ ಎದುರಾಗಿದೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದು ಕೋಲಾರ ಜಿಲ್ಲೆಯ ಪ್ರೇಮಿಗಳ ವಿಡಿಯೋ ಆಗಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

By

Published : Dec 24, 2019, 11:43 AM IST

Published : Dec 24, 2019, 11:43 AM IST

lovers-prepared-video-for-self-defence-in-kolara
ಪ್ರೀತಿಸಿ ಮದುವೆಯಾದ ಪ್ರೇಮಿಗಳು

ಕೋಲಾರ:ಪ್ರೀತಿಸಿ ಮದುವೆಯಾದ ಪ್ರೇಮಿಗಳಿಬ್ಬರು ತಮಗೆ ಜೀವಭಯ ಕಾಡುತ್ತಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಪೋಷಕರ ವಿರೋಧದ ನಡುವೆ ಮದುವೆ- ಜೀವ ಬೆದರಿಕೆಯಿಂದ ವಿಡಿಯೋ ಹರಿಬಿಟ್ಟ ಪ್ರೇಮಿಗಳು

ತಾಲೂಕಿನ ವಲ್ಲಂಬಹಳ್ಳಿ ಗ್ರಾಮದ ಮಧುವಾಣಿ ಹಾಗೂ ಮುಳಬಾಗಿಲು ತಾಲೂಕಿನ ಚೋಳಗುಂಡೆ ಗ್ರಾಮದ ಭರತ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಮನೆಯವರ ವಿರೋಧದ ನಡುವೆಯೂ ಇಬ್ಬರು ಮದುವೆಯಾಗಿದ್ದು, ಹುಡುಗಿ ಮನೆಯವರಿಂದ ಹುಡುಗನ ಮನೆಯವರಿಗೆ ಹಾಗೂ ಹುಡುಗನಿಗೆ ಬೆದರಿಕೆ ಕರೆಗಳು ಬರುತ್ತಿವೆ. ಹಾಗಾಗಿ ನಮಗೆ ರಕ್ಷಣೆ ಕೊಡಿ ಎಂದು ಯುವತಿ ಮನವಿ ಮಾಡಿದ್ದಾಳೆ.

ಅಲ್ಲದೆ ತಮಗೆ ಪ್ರಾಣ ಬೆದರಿಕೆ ಇರುವ ಹಿನ್ನೆಲೆ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.

For All Latest Updates

TAGGED:

ABOUT THE AUTHOR

...view details