ಕರ್ನಾಟಕ

karnataka

ಆಕ್ಸಿಜನ್ ಸಿಗದೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಸಾವು: ಕುಟುಂಬಸ್ಥರ ಆರೋಪ

By

Published : Apr 26, 2021, 11:01 AM IST

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ಕೋವಿಡ್ ಸೋಂಕಿತರು ಮೃತಪಟ್ಟಿದ್ದು, ಆಕ್ಸಿಜನ್ ಕೊರತೆಯೇ ರೋಗಿಗಳ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.

Four Covid patients died Due lack of Oxygen in Kolar
ನಾಲ್ವರು ಕೋವಿಡ್ ಸೋಂಕಿತರು ಸಾವು

ಕೋಲಾರ: ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ಕಳೆದ ರಾತ್ರಿ ಆಕ್ಸಿಜನ್ ಇಲ್ಲದೆ ನಾಲ್ವರು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.

ಜಿಲ್ಲಾಸ್ಪತ್ರೆಯ ಐಸಿಯು ವಾರ್ಡ್​ನಲ್ಲಿ ಸುಮಾರು 15 ಕೊರೊನಾ ರೋಗಿಗಳಿದ್ದರು. ಕಳೆದ ರಾತ್ರಿ ಏಕಾಏಕಿ ಆಕ್ಸಿಜನ್ ಪೂರೈಕೆ ಮಾಡುವುದನ್ನು ನಿಲ್ಲಿಸಲಾಗಿದೆ. ಹೀಗಾಗಿ, ಮೂವರು ಪುರುಷರು ಓರ್ವ ಮಹಿಳೆ ಸೇರಿ ನಾಲ್ವರು ರೋಗಿಗಳು ಮೃತಪಟ್ಟಿದ್ದಾರೆ. ರಾತ್ರಿಯಿಂದ ಆಸ್ಪತ್ರೆಯ ವೈದ್ಯರಿಗೆ, ಅಧಿಕಾರಿಗಳಿಗೆ ಫೋನ್ ಮಾಡಿದರೂ ಯಾರೊಬ್ಬರೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಮೃತ ವ್ಯಕ್ತಿಯೊಬ್ಬರ ಸಂಬಂಧಿಕರು ಆರೋಪಿಸಿದ್ದಾರೆ.

ಮೃತ ವ್ಯಕ್ತಿಯ ಸಂಬಂಧಿಯ ದೂರು

ಇದನ್ನೂಓದಿ: ನಮ್ಮಲ್ಲಿ ಹಾಸಿಗೆ, ವೆಂಟಿಲೇಟರ್ ಫುಲ್ ಆಗಿವೆ: ಫಲಕ ಹಾಕಿದ ಕೆ.ಆರ್.ಆಸ್ಪತ್ರೆ

ರಾಜಕೀಯ ಪ್ರಭಾವವಿದ್ದರೆ ಮಾತ್ರ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುತ್ತಾರೆ ಎಂದು ಮೃತರ ಕುಟುಂಬಸ್ಥರು ದೂರಿದ್ದು, ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details