ಕೊಡಗು:ಸಿದ್ದರಾಮಯ್ಯನವರು ಜಿಲ್ಲೆಯ ಕೊಡ್ಲಿಪೇಟೆಯಲ್ಲಿ ಮಳೆಗಾಲದ ವಿಶೇಷ ಆಹಾರ ಕಳಲೆ ಮತ್ತು ಅಕ್ಕಿರೊಟ್ಟಿ ತಿಂದಿದ್ದಾರೆ. ಜೊತೆಗೆ ಅನ್ನ, ತರಕಾರಿ ಸಾಂಬಾರು ಸೇವಿಸಿದ್ದಾರೆ. ಸ್ವತಃ ನಾನೇ ಅವರಿಗೆ ಊಟ ಬಡಿಸಿದ್ದೇನೆ, ಮಾಂಸಾಹಾರ ತಿಂದು ಅವರು ದೇವಸ್ಥಾನಕ್ಕೆ ಹೋಗಿಲ್ಲ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದ್ದಾರೆ.
ಕೊಡಗಿನ ಮುಕ್ಕೋಡ್ಲಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಕೊಡಗಿಗೆ ಭೇಟಿ ನೀಡಿದ್ದ ವೇಳೆ ಸಿದ್ದರಾಮಯ್ಯನವರು ಮಾಂಸದ ಆಹಾರ ಸೇವಿಸಿದ ಬಳಿಕ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದರು. ಇದೇ ವೇಳೆ ಸಂಪತ್ ಕಾಂಗ್ರೆಸ್ ಕಾರ್ಯಕರ್ತ ಹೇಳಿಕೆ ವಿಚಾರವಾಗಿ, ಆತ ಯಾಕೆ ಕಾಂಗ್ರೆಸ್ನ ಯಾವುದೇ ಸಭೆ ಸಮಾರಂಭಗಳಿಗೆ ಬಂದಿಲ್ಲ. ಕಾರ್ಯಕರ್ತನೇ ಆಗಿದ್ದರೆ ನಮ್ಮೊಂದಿಗೆ ಬಂದು ಬಿಜೆಪಿಯವರಿಗೆ ಮೊಟ್ಟೆ ಹೊಡೆಯಬಹುದಿತ್ತು. ಆದರೆ ಆತ ಯಾಕೆ ಹಾಗೆ ಮಾಡಿಲ್ಲ? ಹಾಗಾದ್ರೆ ಬಿಜೆಪಿಯವರ ಜೊತೆ ನಿಂತು ಯಾಕೆ ಮೊಟ್ಟೆ ಹೊಡೆಯಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.