ಕೊಡಗು:ವ್ಯಕ್ತಿಯೊಬ್ಬನ ಮೇಲೆ ಏಕಾಏಕಿ ಇನ್ನೊಬ್ಬ ಗುಂಡಿನ ದಾಳಿ ನಡೆಸಿರುವ ಘಟನೆ ಸೋಮವಾರಪೇಟೆ ಪಟ್ಟಣದ ಕಾನ್ವೆಂಟ್ ಬಾಣೆ ಬಳಿ ನಡೆದಿದೆ.
ಏನಾಯ್ತೋ ಏನೋ ಏಕಾಏಕಿ ಎದುರಿನಿಂದ ಬಂದವನು ಗುಂಡು ಹಾರಿಸಿಬಿಟ್ಟ.. ಮುಂದೇನಾಯ್ತು ನೋಡಿ.. - ಸುಜಿತ್
ಗುಂಡು ಸುಜಿತ್ ಎದೆ ಭಾಗಕ್ಕೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಸುಜಿತ್
ಕಾನ್ವೆಂಟ್ ಬಾಣೆ ನಿವಾಸಿ ಸುಜಿತ್ ಎಂಬಾತನ ಮೇಲೆ ಗುಂಡಿನ ದಾಳಿ ನಡೆದಿದೆ. ಸೋಮವಾರಪೇಟೆ ನಿವಾಸಿ ಗಣಪತಿ ಎಂಬಾತ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.ಗುಂಡು ಸುಜಿತ್ ಎದೆ ಭಾಗಕ್ಕೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Oct 21, 2019, 12:46 AM IST