ಕರ್ನಾಟಕ

karnataka

ETV Bharat / state

300 ಜನರನ್ನು ಸಂಪರ್ಕಿಸಿದ್ದ ಕೊಡಗು ಮೂಲದ ಕೊರೊನಾ ಸೋಂಕಿತ!

ಮಲ್ಲೇಶ್ವರಂ-ಸೆಟಲೈಟ್​ ಬಸ್​ ನಿಲ್ದಾಣ ಮೂಲಕ ಕೊಡಗು ತಲುಪಿದ್ದ ಕೊರೊನಾ ಸೋಂಕಿತ ವ್ಯಕ್ತಿಯು 300 ಮಂದಿಯನ್ನು ಸಂಪರ್ಕಿಸಿದ್ದಾನೆಂದು ತಿಳಿದುಬಂದಿದೆ. ಸದ್ಯ ಆತ ಸಂಪರ್ಕಿಸಿದ ವ್ಯಕ್ತಿಗಳನ್ನು ಪತ್ತೆ ಮಾಡಲಾಗುತ್ತಿದ್ದು, ಆ ಪೈಕಿ ಕೆಲವರ ಮೇಲೆ ನಿಗಾ ಇಡಲಾಗಿದೆ.

By

Published : Mar 20, 2020, 12:49 PM IST

Updated : Mar 20, 2020, 1:26 PM IST

ಅನೀಸ್ ಕೆ.ಜಾಯ್
ಅನೀಸ್ ಕೆ.ಜಾಯ್

ಕೊಡಗು: ಕೊರೊನಾ ಸೋಂಕಿತ ಕೊಡಗು ಮೂಲದ ವ್ಯಕ್ತಿ ಸೋಂಕಿತ ವ್ಯಕ್ತಿ 300 ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿದ್ದ ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದರು.

ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದ ತನಿಖೆಯಲ್ಲಿ‌ ಕೊಡಗಿನ ಕೊರೊನಾ ಸೋಂಕಿತ ವ್ಯಕ್ತಿ ಒಟ್ಟು 300 ಜನರನ್ನು ಸಂಪರ್ಕಿಸಿದ್ದಾನೆ. ಈಗಾಗಲೇ ಎಲ್ಲರನ್ನೂ ಮನೆಯಲ್ಲೇ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದೇವೆ. ವ್ಯಕ್ತಿಯ ಮನೆಯ ಸುತ್ತ 75 ಮನೆಗಳಿರುವ ಪ್ರದೇಶವನ್ನು ಅತೀ ಸೂಕ್ಷ್ಮ ಹಾಗೆಯೇ ಅಲ್ಲಿಂದ ಐದು ಕಿಲೋ ಮೀಟರ್ ವ್ಯಾಪ್ತಿಯನ್ನು ಸೂಕ್ಷ್ಮ ವಲಯಗಳೆಂದು ಘೋಷಿಸಿದ್ದೇವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಅವರು ಅನೀಸ್ ಕೆ.ಜಾಯ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು

ಅವರೆಲ್ಲರಿಗೂ ಮನೆ ಬಿಟ್ಟು ಬಾರದಂತೆ ಸೂಕ್ತ ಬಂದೋಬಸ್ತ್ ಮಾಡಿದ್ದೇವೆ. ಗ್ರಾಮದ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವಾಹನ ಹಾಗೂ ಪ್ರತ್ಯೇಕ ಕೊಠಡಿಗಳಲ್ಲಿ ಬಿಇಒ ನೇತೃತ್ವದಲ್ಲಿ ಕಲ್ಪಿಸಲಾಗಿದೆ. ಶಾಲಾ ಶಿಕ್ಷಕರು ವ್ಯಕ್ತಿಯ ನೇರ ಸಂಪರ್ಕ ಹೊಂದಿದ್ದರು. ನೇರ ಸಂಪರ್ಕದಲ್ಲಿದ್ದ ಶಿಕ್ಷಕರ ಜೊತೆಗೆ ಆ ಶಾಲೆಗಳ ಎಲ್ಲಾ ಶಿಕ್ಷಕರಿಗೂ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.

Last Updated : Mar 20, 2020, 1:26 PM IST

ABOUT THE AUTHOR

...view details