ಕರ್ನಾಟಕ

karnataka

ETV Bharat / state

ಅಕ್ರಮ ಸ್ಫೋಟಕ ವಸ್ತುಗಳ ಸಂಗ್ರಹ.. ಐವರಿಗೆ ಪೊಲೀಸರು ತೊಡೆಸಿದರು ಕೋಳ

ಮನೆಯಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಣೆ ಮಾಡಿದ್ದ ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ಧಾರೆ.

By

Published : Mar 30, 2019, 11:18 AM IST

ಬಂಧಿತ ಆರೋಪಿಗಳು

ಕೊಡಗು :ಕುಶಾಲನಗರದಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ.

ಸುಂದರನಗರದ ಆರ್.ಮಂಜು, ಮಣಿ, ಬಸವೇಶ್ವರ ಬಡಾವಣೆಯ ಕುಬೇರ, ಬೈಚನಹಳ್ಳಿ ನಿವಾಸಿ ಕೆ.ಆರ್‌.ರವಿ, ಮೈಸೂರು ಜಿಲ್ಲೆ ರಿಜ್ವಾನ್‌ ಅಹಮ್ಮದ್‌ ಬಂಧಿತ ಆರೋಪಿಗಳು. ಬಂಧಿತರಿಂದ ಎಲೆಕ್ಟ್ರಾನಿಕ್ಸ್‌ ಡಿಟೋನೇಟರ್‌, ನಾನ್‌ ಎಲೆಕ್ಟ್ರಾನಿಕ್‌ ಡಿಟೋನೇಟರ್‌, ಅಲ್ಯುಮಿನಿಯಂ ನೈಟ್ರೇಟ್‌, ಕ್ಯಾಲ್ಸಿಯಂ ಹೈಡ್ರಾಕ್ಸೈಡ್‌, ಸೇಫ್ಟಿ ಫ್ಯೂಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳು

ಮನೆಯಲ್ಲಿ ಸ್ಫೋಟಕ ವಸ್ತುಗಳಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಜಿಲ್ಲಾ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಶಕ್ಕೆ ಪಡೆದಿರುವ ವಸ್ತುಗಳು ತೀವ್ರ ರೀತಿಯ ಅಪಾಯಕಾರಿ ಎಂದು ತಿಳಿದು ಬಂದಿದ್ದು, ವಿಧಿ ವಿಜ್ಞಾನ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.

ಕಲ್ಲಿನ ಕ್ವಾರಿ ಸ್ಫೋಟ ಮಾಡಲು ಇವುಗಳನ್ನು ತರಲಾಗಿದೆ ಎಂದು ಆರೋಪಿಗಳು ಬಾಯಿಬಿಟ್ಟಿದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆೊಳಪಡಿಸಲಾಗಿದೆ.

For All Latest Updates

TAGGED:

ABOUT THE AUTHOR

...view details