ಕೊಡಗು:ಮೊನ್ನೆ ನಡೆದಿದ್ದ ಅಬಕಾರಿ ಇಲಾಖೆ ಅಧಿಕಾರಿಗಳ ಬೀದಿ ಜಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ರಾಜ್ಯ ಅಬಕಾರಿ ಆಯುಕ್ತ ವಿ.ಯಶವಂತ್ ಆದೇಶ ಹೊರಡಿಸಿದ್ದಾರೆ.
ಅಬಕಾರಿ ಅಧಿಕಾರಿಗಳ ಬೀದಿ ಜಗಳ: ಅಮಾನತು ಮಾಡಿ ಆಯುಕ್ತರ ಆದೇಶ..! - ಅಬಕಾರಿ ಅಧಿಕಾರಿಗಳ ಬೀದಿ ಜಗಳ
ಕೊಡಗು ಜಿಲ್ಲೆಯ ಸೋಮವಾರಪೇಟೆ ಅಬಕಾರಿ ಇನ್ಸ್‌ಪೆಕ್ಟರ್ ನಟರಾಜ್ ಮತ್ತು ಉಪ ಅಧೀಕ್ಷಕ ಶಿವಪ್ಪ ನಡು ಬೀದಿಯಲ್ಲೇ ಹೊಡೆದಾಡಿಕೊಂಡಿದ್ದು, ಈ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ರಾಜ್ಯ ಅಬಕಾರಿ ಆಯುಕ್ತ ವಿ.ಯಶವಂತ್ ಆದೇಶ ಹೊರಡಿಸಿದ್ದಾರೆ.
ಅಧಿಕಾರಿಗಳ ಬೀದಿ ಜಗಳ
ಕೊಡಗು: ಬೀದಿಯಲ್ಲೇ ಬಡಿದಾಡಿಕೊಂಡ ಅಬಕಾರಿ ಪೊಲೀಸರು!
ಸೋಮವಾರಪೇಟೆ ತಾಲೂಕಿನ ಆಲೂರು- ಸಿದ್ಧಾಪುರದಲ್ಲಿ ಮೊನ್ನೆ ಅಬಕಾರಿ ಉಪ ಅಧೀಕ್ಷಕ ಶಿವಪ್ಪ ಹಾಗೂ ಇನ್ಸ್‌ಪೆಕ್ಟರ್ ನಟರಾಜ್ ನಡುವೆ ಬೀದಿ ಜಗಳ ನಡೆದಿತ್ತು. ಈ ಹಿನ್ನೆಲೆ ಅಬಕಾರಿ ಆಯುಕ್ತರ ಆದೇಶದ ಮೇರೆಗೆ ಇಬ್ಬರನ್ನು ಅಮಾನತು ಮಾಡಲಾಗಿದೆ.