ಕರ್ನಾಟಕ

karnataka

ಕೊಡಗಿನ ಮೂಲಕ ಕೇರಳ ಕಾರ್ಮಿಕರ ಸ್ಥಳಾಂತರಕ್ಕೆ ಬೋಪಯ್ಯ ವಿರೋಧ

ಕುಶಾಲನಗರ ಚೆಕ್‍ ಪೋಸ್ಟ್​ನಲ್ಲಿ ಮೈಸೂರಿನಲ್ಲಿ ಸಿಲುಕಿದ್ದ ಕೇರಳ ಕಾರ್ಮಿಕರನ್ನು ಕೊಡಗಿನ ಮೂಲಕ ಸಾಗಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ.

By

Published : May 9, 2020, 12:00 AM IST

Published : May 9, 2020, 12:00 AM IST

ಕೇರಳ ಕಾರ್ಮಿಕರ ಸಾಗಾಟಕ್ಕೆ ವಿರೋಧ
ಕೇರಳ ಕಾರ್ಮಿಕರ ಸಾಗಾಟಕ್ಕೆ ವಿರೋಧ

ಕೊಡಗು: ಕೆಲಸ ಅರಸಿ ಬಂದು ಮೈಸೂರಿನಲ್ಲಿ ಸಿಲುಕಿದ್ದ 60ಕ್ಕೂ ಹೆಚ್ಚಿನ ಕೇರಳ ಮೂಲದ ಕಾರ್ಮಿಕರನ್ನು ಕೊಡಗಿನ ಮೂಲಕ ಸಾಗಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಘಟನೆ ಕುಶಾಲನಗರ ಚೆಕ್‍ ಪೋಸ್ಟ್​ನಲ್ಲಿ ನಡೆಯಿತು. ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಕುಶಾಲನಗರದ ಚೆಕ್ ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಾಕ್​ಡೌನ್​ ಹಿನ್ನೆಲೆ ಮೈಸೂರಿನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಮೈಸೂರು ಜಿಲ್ಲಾಡಳಿತ ಮೂರು ಬಸ್​ಗಳಲ್ಲಿ ಕೊಡಗಿನ ಮೂಲಕ ಕೇರಳಕ್ಕೆ ಸಾಗಿಸುತಿತ್ತು. ಈ ವೇಳೆ ಕುಶಾಲನಗರ ಚೆಕ್ ಪೋಸ್ಟ್ ಮೂಲಕ ಕೊಡಗಿಗೆ ಬಸ್​ಗಳು ಬರುತ್ತಿರುವುದಕ್ಕೆ ಶಾಸಕ ಕೆ.ಜಿ.ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು. ಚೆಕ್ ಪೋಸ್ಟ್​ನಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಆದರೆ ಮೈಸೂರು ಕಮಿಷನರ್ ಈ ಬಸ್​ಗಳನ್ನು ಕೊಡಗಿನ ಮೂಲಕ ಕೇರಳಕ್ಕೆ ಕಳುಹಿಸಲು ಮುಂದಾಗಿದ್ದು ಏಕೆ? ಇಷ್ಟು ಕಾರ್ಮಿಕರನ್ನು ಕೇರಳಕ್ಕೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಕಾಫಿ, ಟೀಗೆ ಅಥವಾ ಊಟಕ್ಕೆ ಅಂತಾ ಇಳಿಯದೇ ಇರುವುದಿಲ್ಲ. ಈ ವೇಳೆ ಯಾರಿಗಾದ್ರೂ ವೈರಸ್ ಇದ್ದು, ಕೊಡಗಿನ ಜನತೆಗೆ ಹರಡಿದರೆ ಇದಕ್ಕೆ ಯಾರು ಹೊಣೆ? ಹೀಗಾಗಿ ಕೊಡಗಿನ ಮೂಲಕ ಕಾರ್ಮಿಕರನ್ನು ಸಾಗಿಸಬಾರದು ಎಂದು ಶಾಸಕ ಕೆ.ಜಿ.ಬೋಪಯ್ಯ ಬಸ್​ಗಳನ್ನು ತಡೆ ಹಿಡಿದರು.

ABOUT THE AUTHOR

...view details