ಕರ್ನಾಟಕ

karnataka

ಕೊಡಗು: 14 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ

ಭಾರಿ ಗಾತ್ರದ ಕಾಳಿಂಗ ಸರ್ಪವೊಂದು ಕೊಡಗು ಜಿಲ್ಲೆಯಲ್ಲಿ ಪತ್ತೆಯಾಗಿದೆ.

By

Published : Sep 25, 2020, 3:38 PM IST

Published : Sep 25, 2020, 3:38 PM IST

14 feet cobra found, 14 feet cobra found in Kodagu, 14 feet cobra found news, 14 ಅಡಿಯ ಕಾಳಿಂಗ ಸರ್ಪ ಪತ್ತೆ, ಕೊಡಗಿನಲ್ಲಿ 14 ಅಡಿಯ ಕಾಳಿಂಗ ಸರ್ಪ ಪತ್ತೆ, 14 ಅಡಿಯ ಕಾಳಿಂಗ ಸರ್ಪ ಪತ್ತೆ ಸುದ್ದಿ,
ಕೊಡಗಿನಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ

ವಿರಾಜಪೇಟೆ/ಕೊಡಗು: ಭಾರಿ ಗಾತ್ರದ ಕಾಳಿಂಗ ಸರ್ಪವೊಂದನ್ನು ತಾಲೂಕಿನ ಬಿಟ್ಟಂಗಾಲದಲ್ಲಿ ಸೆರೆ ಹಿಡಿಯಲಾಗಿದೆ.

ಕೊಡಗಿನಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ

ಬಿಟ್ಟಂಗಾಲದ ಗ್ರಾಮದ ಕಾಳೆಂಗಡ ರಮೇಶ್ ಮನೆಯಲ್ಲಿ ಸುಮಾರು ಹದಿನಾಲ್ಕು ಅಡಿ ಉದ್ದದ ಕಾಳಿಗ ಸರ್ಪ ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಉರಗ ತಜ್ಞ ಗಗನ್ ಸುಮಾರು ಒಂದು ಗಂಟೆಗಳ ಕಾಲ ಶ್ರಮವಹಿಸಿ ಸುರಕ್ಷಿತವಾಗಿ ಹಿಡಿದು ಕೇರಳ ಕರ್ನಾಟಕ ಗಡಿಭಾಗದ ಮಾಕುಟ್ಟ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟರು.

ಇದರ ಬಗ್ಗೆ ಮಾತನಾಡಿದ ಗಗನ್, ಸಾಮಾನ್ಯವಾಗಿ ಸರ್ಪಗಳು ಈ ಸಮಯದಲ್ಲಿ ತಮ್ಮ ಪೊರೆ ಕಳಚಲು ಪಾಳುಬಿದ್ದ ಮನೆಗಳು, ಮರದ ಪೊಟರೆಗಳಲ್ಲಿ ಮಲಗಿರುತ್ತವೆ. ದಯವಿಟ್ಟು ಸಾರ್ವಜನಿಕರು ಹಾವುಗಳನ್ನು ಕಂಡಲ್ಲಿ ಅವುಗಳಿಗೆ ಹಾನಿ ಮಾಡದೇ ನನಗೆ ಕರೆ ಮಾಡಿ. ನಾನು ಅವುಗಳನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುತ್ತೇನೆ ಎಂದು ಅವರು ತಿಳಿಸಿದರು.

ABOUT THE AUTHOR

...view details