ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸುಲಫಲ ಮಠದ ಸಹಯೋಗದಲ್ಲಿ ತಾಲೂಕಿನ ತಾಜಸುಲ್ತಾನಪುರದ ಸುಲಫಲ ಮಠದಲ್ಲಿ ಮಹಿಳಾ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿತ್ತು.
ಸುಲಫಲ ಮಠದಲ್ಲಿ ಮಹಿಳಾ ಸಾಂಸ್ಕೃತಿಕ ಉತ್ಸವದ ರಂಗು - ಸುಲಫಲ ಮಠದಲ್ಲಿ ಮಹಿಳಾ ಸಾಂಸ್ಕೃತಿಕ ಉತ್ಸವ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸುಲಫಲ ಮಠದ ಸಹಯೋಗದಲ್ಲಿ ಕಲಬುರಗಿಯ ತಾಜಸುಲ್ತಾನಪುರದ ಸುಲಫಲ ಮಠದಲ್ಲಿ ಮಹಿಳಾ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಿದರು. ಈ ವೇಳೆ ವಚನ ಗಾಯನ, ಸೀತಾರ ವಾದನ, ಸಮೂಹ ನೃತ್ಯ, ತತ್ವ ಪದ ಗಾಯನ, ಭರತನಾಟ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಗಮಳು ಗಮನ ಸೆಳೆದವು. ಉತ್ಸವದ ನಿಮಿತ್ತ ಮಹಿಳೆಯರ ಚಿತ್ರಕಲಾ ಶಿಬಿರವನ್ನೂ ಆಯೋಜಿಸಲಾಗಿತ್ತು. ಮಹಿಳೆ ಆಧಾರಿತ ಚಿತ್ರ ಬಿಡಿಸುವ ಮೂಲಕ ಕಾಲೇಜು ವಿದ್ಯಾರ್ಥಿನಿಯರು ಭ್ರೂಣ ಹತ್ಯೆ ಹಾಗೂ ಮಹಿಳಾ ಸಬಲೀಕರಣದ ಬಗ್ಗೆ ಚಿತ್ರಗಳ ಮೂಲಕ ಜಾಗೃತಿ ಮೂಡಿಸಿದರು.
ಶ್ರೀಶೈಲ ಸಾರಂಗಮಠದ ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿಕೊಂಡಿದ್ದರು. ಸಮಾರಂಭದಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.
TAGGED:
ಮಹಿಳಾ ಸಾಂಸ್ಕೃತಿಕ ಉತ್ಸವ