ಕಲಬುರಗಿ: ಯಾರ ಮೇಲೆಯೂ ಭಾಷೆಯನ್ನು ಒತ್ತಾಯ ಪೂರ್ವಕವಾಗಿ ಹೇರಬಾರದು, ಅವರವರ ಭಾಷೆ ಅವರವರಿಗೆ ಬಿಟ್ಟಿದ್ದು ಎಂದು ಸಂಸದ ಉಮೇಶ್ ಜಾಧವ್ ಅಭಿಪ್ರಾಯಪಟ್ಟರು.
ಭಾಷೆಯನ್ನು ಒತ್ತಾಯ ಪೂರ್ವಕವಾಗಿ ಹೇರಬಾರದು: ಉಮೇಶ್ ಜಾಧವ್ ಇಂಗಿತ
ದೇಶಾದ್ಯಂತ ಒಂದು ಸಾಮಾನ್ಯ ಭಾಷೆ ಇರಬೇಕೆಂಬ ವಿಚಾರ ಬಂದಿದೆ. ಅಮಿತ್ ಷಾ ಅವರು ಬೇರೆ ಭಾಷೆ ಇರಬಾರದು ಎಂದು ಹೇಳಿಲ್ಲ. ಬೇರೆ ಭಾಷೆ ಮಾತನಾಡಲೂ ಆಕ್ಷೇಪಿಸಿಲ್ಲ. ಆದರೆ ಒಂದು ಭಾಷೆಯನ್ನು ದೇಶದ ಭಾಷೆಯನ್ನಾಗಿಸುವಂತೆ ಕೇಳ್ತಿದ್ದಾರೆ ಎಂದು ಉಮೇಶ್ ಜಾಧವ್ ಹೇಳಿದ್ರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದರು, ಸದ್ಯ ದೇಶಾದ್ಯಂತ ಒಂದು ಕಾಮನ್ ಭಾಷೆ ಇರಬೇಕೆಂಬ ವಿಚಾರ ಬಂದಿದೆ. ಅಮಿತ್ ಷಾ ಬೇರೆ ಭಾಷೆ ಇರಬಾರದು ಎಂದು ಹೇಳಿಲ್ಲ. ಬೇರೆ ಭಾಷೆ ಮಾತನಾಡಲೂ ಆಕ್ಷೇಪಿಸಿಲ್ಲ. ಆದರೆ ಒಂದು ಭಾಷೆಯನ್ನು ದೇಶದ ಭಾಷೆಯನ್ನಾಗಿಸುವಂತೆ ಕೇಳ್ತಿದ್ದಾರೆ. ಈ ಕುರಿತು ನಮ್ಮ ಮುಖಂಡರಿಗೆ ನಮ್ಮ ಅಭಿಪ್ರಾಯ ತಿಳಿಸ್ತೇವೆ ಎಂದು ಹೇಳಿದ್ರು.
ಬ್ಯಾಂಕ್ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆಗಳ ಕಡೆಗಣನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದೆವು. ಇದಕ್ಕೆ ಕೇಂದ್ರ ಸಚಿವರೂ ಒಪ್ಪಿಗೆ ಸೂಚಿಸಿದ್ದರು. ಆದರೀಗ ಬದಲಾವಣೆ ಏಕೆಂದು ಗೊತ್ತಾಗಿಲ್ಲ. ಈ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ರು.