ಕರ್ನಾಟಕ

karnataka

By

Published : Dec 27, 2019, 5:41 PM IST

ETV Bharat / state

ಕಲಬುರಗಿಯಲ್ಲಿ ಎಸ್ಎಸ್ಎಲ್​ಸಿ ಮಕ್ಕಳಿಗಾಗಿ ನೇರ ಫೋನ್ ಇನ್​​ ಕಾರ್ಯಕ್ರಮ

ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ ಎಸ್ಎಸ್ಎಲ್​ಸಿ ಫಲಿತಾಂಶ ಕುಸಿದಿದೆ. ಆದ್ದರಿಂದ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳಲ್ಲಿರುವ ಅಸ್ಪಷ್ಟತೆ ಹಾಗೂ ಗೊಂದಲ, ಅನುಮಾನಗಳಿಗೆ ತೆರೆ ಎಳೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಎಸ್ಎಸ್ಎಲ್​ಸಿ ಮಕ್ಕಳಿಗಾಗಿ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದೆ.

press meet
ಸುದ್ದಿಗೋಷ್ಠಿ

ಕಲಬುರಗಿ: ಪ್ರಸ್ತುತ ಸಾಲಿನ‌ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಒಟ್ಟು ಹತ್ತು ಅಂಶಗಳ ವಿವಿಧ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಾಂತಗೌಡ ಪಾಟೀಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ್

ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಎಸ್ಎಸ್ಎಲ್​ಸಿ ಫಲಿತಾಂಶ ಕುಸಿದಿದೆ. ಆದ್ದರಿಂದ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳಲ್ಲಿರುವ ಅಸ್ಪಷ್ಟತೆ ಹಾಗೂ ಗೊಂದಲ, ಅನುಮಾನಗಳಿಗೆ ತೆರೆ ಎಳೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಎಸ್ಎಸ್ಎಲ್​ಸಿ ಮಕ್ಕಳಿಗಾಗಿ ನೇರ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.

ಫೋನ್-ಇನ್ ಕಾರ್ಯಕ್ರಮದಲ್ಲಿ ಒಟ್ಟು 48 ಜನ ನುರಿತ ಅನುಭವಿ ಹಾಗೂ ಸಂಪನ್ಮೂಲ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ‌. ಜನವರಿ 1ರಂದು ಪ್ರಾರಂಭವಾಗಲಿರುವ ಫೋನ್ ಇನ್ ಕಾರ್ಯಕ್ರಮ ಫೆಬ್ರುವರಿ 28ರವರೆಗೂ ಪ್ರತಿದಿನ ಸಂಜೆ 7ರಿಂದ 9 ಗಂಟೆವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳಲ್ಲಿರುವ ಅನುಮಾನಕ್ಕೆ ನೇರ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ABOUT THE AUTHOR

...view details