ಕರ್ನಾಟಕ

karnataka

ETV Bharat / state

ಗಾಯಾಳು ಹೆಸರಲ್ಲಿ ಕೈ-ಕಮಲ ಕೀಳು ರಾಜಕೀಯ.. ಯುವಕನ ಚಿಕಿತ್ಸೆಗೆ ಮುಂದಾದ ಜೆಡಿಎಸ್​ ಮುಖಂಡ ಬಾಲರಾಜ..

ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೆ ಹಾಗೂ ಆತನ ಕುಟುಂಬ ಸದಸ್ಯರಿಗೆ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದೇನೆ. ಯುವಕನ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದಿದ್ದೇನೆ. ಆತನ ವೈದ್ಯಕೀಯ ಚಿಕಿತ್ಸೆಯ ವೆಚ್ಚ ಭರಿಸುತ್ತೇನೆ ಎಂದು ಬಾಲರಾಜ ಅವರು ಭರವಸೆ ನೀಡಿದರು..

sedam-djs-leader-balaraj-statement-against-bjp-and-congress
ಜೆಡಿಎಸ್​ ಮುಖಂಡ ಬಾಲರಾಜ

By

Published : Oct 17, 2021, 7:43 PM IST

Updated : Oct 17, 2021, 10:09 PM IST

ಸೇಡಂ :ಮುಧೋಳ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆಗೊಳಗಾದ ಬಡ ಯುವಕನಿಗೆ ಚಿಕಿತ್ಸೆ ನೀಡಿ ಕಾಪಾಡುವುದು ಬಿಟ್ಟು ಕಾಂಗ್ರೆಸ್​​​-ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ್ ಕಿಡಿಕಾರಿದ್ದಾರೆ.

ಗಾಯಾಳು ಹೆಸರಲ್ಲಿ ಕೈ-ಕಮಲ ಕೀಳು ರಾಜಕೀಯ

ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಕ್ಷೇತ್ರದ ಜನರ ಹಿತ ಕಾಪಾಡುವ ಬದಲು ಜನರಿಗೆ ತೊಂದರೆ ನೀಡುವ ಹಂತಕ್ಕೆ ಬಂದು ನಿಂತಿದ್ದಾರೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯುವಕನ ಹೆಸರಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಓದಿ-ಮುಧೋಳ ಯುವಕನ ಮೇಲಿನ ಹಲ್ಲೆ ಪ್ರಕರಣ ಸಂಬಂಧ PI ಅಮಾನತು.. ಕಾವೇರಿದ ಕಾಂಗ್ರೆಸ್-ಬಿಜೆಪಿ ಪ್ರತಿಭಟನೆ..

ಕಾಂಗ್ರೆಸ್ ಪಕ್ಷದವರು ಮುಧೋಳದಲ್ಲಿ ಪಿಐ ಆನಂದರಾವ್ ಅಮಾನತು ಮಾಡಿ ಎಂದು ಪ್ರತಿಭಟಿಸಿದರೆ, ಬಿಜೆಪಿಯವರು ಅಧಿಕಾರಿಯ ಅಮಾನತು ಹಿಂಪಡೆಯುವಂತೆ ಪ್ರತಿಭಟಿಸಿದ್ದಾರೆ. ಯಾರೊಬ್ಬರು ಕೂಡ ಪಕ್ಷ ಬೇಧ ಮರೆತು ಆ ಎರಡು ಸಮುದಾಯದವರನ್ನ ಕರೆಸಿ ಸಭೆ ಮಾಡಿ ಇಬ್ಬರಿಗೂ ಸಂಧಾನ ಮಾಡುವ ಕೆಲಸ ಎರಡೂ ಪಕ್ಷದ ನಾಯಕರು ಮಾಡಿಲ್ಲ.

ಅಲ್ಲದೆ, ಮಾರಣಾಂತಿಕ ಹಲ್ಲೆಗೊಳಗಾಗಿ ಸಾವು-ಬದುಕಿನ ಮಧ್ಯೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ಯುವಕನ ಕುಟುಂಬದ ಆರ್ಥಿಕ ಪರಿಸ್ಥಿತಿ ಬಗ್ಗೆ ಯೋಚನೆ ಮಾಡಿಲ್ಲ.

ಬರೀ ಮುಗ್ಧ ಜನರ ಜತೆ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಪೊಲೀಸ್​​ ಅಧಿಕಾರಿಗೆ ಪಕ್ಷ ಬೈದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಚಿಕಿತ್ಸಾ ವೆಚ್ಚ ಭರಿಸುವ ಭರವಸೆ :ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನಿಗೆ ಹಾಗೂ ಆತನ ಕುಟುಂಬ ಸದಸ್ಯರಿಗೆ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದೇನೆ. ಯುವಕನ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದಿದ್ದೇನೆ. ಆತನ ವೈದ್ಯಕೀಯ ಚಿಕಿತ್ಸೆಯ ವೆಚ್ಚ ಭರಿಸುತ್ತೇನೆ ಎಂದು ಬಾಲರಾಜ ಅವರು ಭರವಸೆ ನೀಡಿದರು.

Last Updated : Oct 17, 2021, 10:09 PM IST

ABOUT THE AUTHOR

...view details