ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ: ಮೂವರು ಯುವತಿಯರ ರಕ್ಷಣೆ - ವೇಶ್ಯಾವಾಟಿಕೆ

ವೇಶ್ಯಾವಾಟಿಕೆಯಲ್ಲಿ ತೊಡಗಿದ ಮೂವರು ಯುವತಿಯರನ್ನು ಮಹಿಳಾ ಸಾಂತ್ವನ‌ ಕೇಂದ್ರಕ್ಕೆ ಒಪ್ಪಿಸಲಾಗಿದೆ.

ವೇಶ್ಯಾವಾಟಿಕೆ
ವೇಶ್ಯಾವಾಟಿಕೆ

By

Published : May 25, 2023, 9:51 PM IST

ಕಲಬುರಗಿ : ನಗರದಲ್ಲಿ ಪ್ರತ್ಯೇಕವಾಗಿ ಎರಡು ಕಡೆ ವೇಶ್ಯಾವಾಟಿಕೆ ದಂಧೆಯ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದ ಮೂವರು ಯುವತಿಯರನ್ನು ರಕ್ಷಣೆ ಮಾಡಿ, ಮೂವರು ಪುರುಷರು ಹಾಗೂ ದಂಧೆ ನಡೆಸುತ್ತಿದ್ದ ಇಬ್ಬರು‌ ಮಹಿಳೆಯರನ್ನು ಬಂಧಿಸುವಲ್ಲಿ ಯಶಸ್ವಿ‌ಯಾಗಿದ್ದಾರೆ.

ರಾಘವೇಂದ್ರ ನಗರ ಪೊಲೀಸ್​​ ಠಾಣಾ ವ್ಯಾಪ್ತಿಯ ಮಹಾಲಕ್ಷ್ಮೀ ಲೇಔಟ್ ಘನಶಾಮ ಅಪಾರ್ಟ್​​​​ಮೆಂಟ್​​ನಲ್ಲಿ ವೇಶ್ಯಾವಾಟಿಕೆ ನಡೆದಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದು, ಇಬ್ಬರು ಪುರುಷರನ್ನು ವಶಕ್ಕೆ ಪಡೆದಿದ್ದಾರೆ. ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಗೀತಾದೇವಿ ಹೊಸಮನಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ :ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; ಮೈಸೂರಿನಲ್ಲಿ 6 ಯುವತಿಯರ ರಕ್ಷಣೆ

ಇನ್ನೊಂದಡೆ ಬ್ರಹ್ಮಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣಿ ಪೆಟ್ರೋಲ್ ಪಂಪ್ ಹತ್ತಿರದ ಶರಣ ನಗರ ಕಾಲೋನಿಯ ಮನೆಯೊಂದರ ಮೇಲೆಯೂ ಪೊಲೀಸರು ದಾಳಿ ನಡೆಸಿದ್ದು, ಓರ್ವ ಯುವತಿಯನ್ನು ರಕ್ಷಣೆ ಮಾಡಿದ್ದಾರೆ. ಓರ್ವ ಪುರುಷ ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ರೇಣುಕಾ ಸಾಗರ ಎಂಬ ಮಹಿಳೆ ವಿರುದ್ಧ ಮಹಿಳಾ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ :ಮಹಿಳಾ ಕಾಸ್ಟಿಂಗ್​ ನಿರ್ದೇಶಕಿ ವೇಶ್ಯಾವಾಟಿಕೆ ದಂಧೆ.. ಗಿರಾಕಿಗಳ ರೀತಿ ಹೋದ ಪೊಲೀಸರು, ಮುಂದಾಗಿದ್ದೇನು?

ವೇಶ್ಯಾವಾಟಿಕೆಯಲ್ಲಿ ತೊಡಗಿದ ಮೂವರು ಯುವತಿಯರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗಿದ್ದು, ಮೂವರು ಪುರುಷರು ಮತ್ತು ದಂಧೆ ನಡೆಸುತ್ತಿದ್ದ ಗೀತಾದೇವಿ ಹೊಸಮನಿ, ರೇಣುಕಾ ಸಾಗರ ಸೇರಿ ಐವರ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಲೂನ್ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ : ಇನ್ನೊಂದು ಕಡೆ ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ಸಾಯಿ ಆರ್ಕೇಡ್ ಕಟ್ಟಡದ ರಾಯಲ್ ಆರ್ಚ್ ಫ್ಯಾಮಿಲಿ ಸಲೂನ್ ಮತ್ತು ಸ್ಪಾ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿ ಮೇರೆಗೆ ಸ್ಪಾ ಮತ್ತು ಸಲೂನ್ ಮೇಲೆ ದಾಳಿ ನಡೆಸಿದ್ದಾಗ ವೇಶ್ಯಾವಾಟಿಕೆ ನಡೆಸುತ್ತಿರುವುದು ಪಕ್ಕ ಆಗಿತ್ತು. ಈ ಸಂದರ್ಭದಲ್ಲಿ ಸಲೂನ್ ಸ್ಪಾ ಮಾಲೀಕರನ್ನು ಬಂಧಿಸಿ, 6 ಜನ ಮಹಿಳೆಯರನ್ನು ಮಹಿಳಾ ಪೊಲೀಸರು ರಕ್ಷಿಸಿದ್ದರು.

ರಕ್ಷಿಸಲಾದ 6 ಜನ ಮಹಿಳೆಯರಿಗೆ ಸ್ಪಾ ಮಾಲೀಕರಾದ ಗೋಪಾಲ್​ ವೈ ಮತ್ತು ವಿದ್ಯಾಶ್ರೀ ಅವರು ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ರಕ್ಷಿಸಲ್ಪಟ್ಟ ಎಲ್ಲ ಮಹಿಳೆಯರು ಬೇರೆ ಬೇರೆ ರಾಜ್ಯದವರು ಎಂದು ತಿಳಿದು ಬಂದಿದೆ. ಹಾಗೂ ದಂಧೆ ನಡೆಸುತ್ತಿದ್ದ ಆರೋಪಿ ದಂಪತಿ ಬಂಧಿಸಿದ್ದು ಪ್ರಕರಣ ಕೂಡ ದಾಖಲಾಗಿದೆ.

ಇದನ್ನೂ ಓದಿ :15 ದಿನದ ಹಿಂದಷ್ಟೇ ಆರಂಭವಾಗಿದ್ದ ಸ್ಪಾದಲ್ಲಿ ವೇಶ್ಯಾವಾಟಿಕೆ ದಂಧೆ: ಶಿವಮೊಗ್ಗದಲ್ಲಿ 6 ಯುವತಿಯರ ರಕ್ಷಣೆ, ದಂಪತಿ ಬಂಧನ

ABOUT THE AUTHOR

...view details