ಕರ್ನಾಟಕ

karnataka

ETV Bharat / state

ಕಲಬುರಗಿ: ಪಿಸ್ತೂಲ್ ಮಾರಾಟ ಜಾಲ ಭೇದಿಸಿದ ಸಿಸಿಬಿ

ಕಲಬುರಗಿಯಲ್ಲಿ ಪಿಸ್ತೂಲ್​ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಐದು ಜನರನ್ನು ನಗರದ ಸ್ಪೆಷಲ್ ಕ್ರೈಂ ಬ್ರಾಂಚ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ.

By

Published : Mar 25, 2021, 9:29 PM IST

pistol-vendor-arersted-by-special-crime-branch-police-in-kalaburagi
ಪಿಸ್ತೂಲ್ ಮಾರಾಟ ಜಾಲ ಭೇದಿಸಿದ ಸಿಸಿಬಿ

ಕಲಬುರಗಿ: ನಗರದಲ್ಲಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸ್ಪೆಷಲ್ ಕ್ರೈಂ ಬ್ರಾಂಚ್​ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಸ್ತೂಲ್, ಮೊಬೈಲ್​ ಜಪ್ತಿ

ಎಂ ಬಿ ನಗರ ಠಾಣಾ ವ್ಯಾಪ್ತಿಯ ಸೌಭಾಗ್ಯ ಕಲ್ಯಾಣ ಮಂಟಪ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಲಬುರಗಿ ನಿವಾಸಿಗಳಾದ ಅಬು ಮೌಲಾನಾ, ಸದ್ದಾಂ, ಮಹಮ್ಮದ್​ ‌ಆಸಿಫ್​, ಅಬ್ದುಲ್ ಮನ್ನಾನ್, ಇನಿಯಾಸ್ ಅಲಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಕೋವಿಡ್ ಎರಡನೇ ಅಲೆ: ಸಾರ್ವಜನಿಕ ಸ್ಥಳಗಳಲ್ಲಿ ಹಬ್ಬ ಆಚರಣೆ ನಿಷೇಧಿಸಿ ಆದೇಶ

ಬಂಧಿತರಿಂದ ಎರಡು ಪಿಸ್ತೂಲ್, ಎರಡು ಜೀವಂತ ಗುಂಡು, ಇನ್ನೋವಾ ಕಾರು ಸೇರಿದಂತೆ ನಾಲ್ಕೈದು ಮೊಬೈಲ್ ಫೋನ್​ ಜಪ್ತಿ ಮಾಡಿದ್ದಾರೆ. ಮತ್ತೋರ್ವ ಆರೋಪಿ ಸಲ್ಮಾನ್ ಎಂಬಾತ ಪರಾರಿಯಾಗಿದ್ದು, ಆತನ ಬಂಧನಕ್ಕೆ ಜಾಲ ಬೀಸಲಾಗಿದೆ. ಈ ಕುರಿತು ಎಂ ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details