ಕರ್ನಾಟಕ

karnataka

ETV Bharat / state

ಬಿ ವೈ ವಿಜಯೇಂದ್ರ ಪತ್ನಿ ಸಹೋದರನ ಮೇಲೆ ಲೋಕಾ ದಾಳಿ : ಕ್ರಮ ಸ್ವಾಗತಿಸಿದ ಬಿಜೆಪಿ ರಾಜ್ಯಾಧ್ಯಕ್ಷ

ಬಿ.ವೈ ವಿಜೇಯೇಂದ್ರ ಅವರು ತಮ್ಮ ಪತ್ನಿ ಸಹೋದರನ ಮೇಲಿನ ಲೋಕಾಯುಕ್ತ ದಾಳಿಯನ್ನು ಸ್ವಾಗತಿಸಿದ್ದಾರೆ.

By ETV Bharat Karnataka Team

Published : Dec 5, 2023, 1:36 PM IST

Updated : Dec 5, 2023, 5:49 PM IST

ಕ್ರಮ ಸ್ವಾಗತಿಸಿದ ಬಿಜೆಪಿ ರಾಜ್ಯಾಧ್ಯಕ್ಷ
ಕ್ರಮ ಸ್ವಾಗತಿಸಿದ ಬಿಜೆಪಿ ರಾಜ್ಯಾಧ್ಯಕ್ಷ

ಲೋಕಾಯುಕ್ತ ದಾಳಿ ಸ್ವಾಗತಿಸಿದ ಬಿ ವೈ ವಿಜಯೇಂದ್ರ

ಕಲಬುರಗಿ‌:ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪತ್ನಿ ಸಹೋದರ ಡಾ. ಪ್ರ ಭುಲಿಂಗ್ ಮಾನಕರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಯಾದಗಿರಿ ಜಿಲ್ಲಾ ಆರೋಗ್ಯ ಅಧಿಕಾರಿಯಾಗಿರುವ ಡಾ. ಪ್ರಭುಲಿಂಗ ಮಾನಕರ್ ಅವರ ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯ ಮಹಾಲಕ್ಷ್ಮಿ ಗ್ರೀನ್ಸ್ ಅಪಾರ್ಟ್ಮೆಂಟ್​ನಲ್ಲಿರುವ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಆದಾಯಕ್ಕಿಂತ ಅಧಿಕ ಹೆಚ್ಚಿನ ಆಸ್ತಿ ಸಂಪಾದನೆ ದೂರು ಹಿನ್ನೆಲೆ ಲೋಕಾಯುಕ್ತ ಎಸ್ಪಿ ಕರ್ನೂಲ್ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಬೆಳಗ್ಗೆಯಿಂದ ಶೋಧ ನಡೆಸುತ್ತಿರುವ ಅಧಿಕಾರಿಗಳು ಇಲ್ಲಿವರೆಗೆ 300 ಗ್ರಾಂ ಚಿನ್ನಾಭರಣ, 3 ಲಕ್ಷ ನಗದು ಪತ್ತೆ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ದಾಳಿ ​ಬಗ್ಗೆ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ:ತಮ್ಮ ಸಂಬಂಧಿ ಮೇಲಿನಲೋಕಾಯುಕ್ತದಾಳಿಯ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಸಂಬಂಧಿ ಮೇಲಿನ ಲೋಕಾಯುಕ್ತ ದಾಳಿಯನ್ನು ನಾನು ಸ್ವಾಗತಿಸುತ್ತೇನೆ. ತಪ್ಪಿತಸ್ಥರ ಮೇಲೆ ಕ್ರಮ ಆಗಲಿ" ಎಂದು ಹೇಳಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ತುಂಬಾ ಸಂತೋಷ. ಇದನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಯಾರಾದರೂ ಮಾಡಲಿ. ಯಾರು ತಪ್ಪಿತಸ್ಥರು ಇದ್ದರೂ ಅವರ ವಿರುದ್ಧ ಸರಿಯಾದ ಕ್ರಮ‌ ತೆಗೆದುಕೊಳ್ಳಬೇಕು. ಅದನ್ನು ನಾನು ಸ್ವಾಗತ ಮಾಡುತ್ತೇನೆ ಎಂದಿದ್ದಾರೆ.

ಇಂಥ ಸರ್ಕಾರ ಇನ್ನೊಂದಿಲ್ಲ:ಬಳಿಕ ಮಾತನಾಡಿದ ಅವರು,ಮೊನ್ನೆ ತಾನೆ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಂದಿದೆ. ಬಿಜೆಪಿಗೆ ಎಲ್ಲರ ನಿರೀಕ್ಷೆ ಮೀರಿ ಅಭೂತಪೂರ್ವ ಗೆಲುವು ಸಿಕ್ಕಿದೆ. ಇದರಿಂದ ಕಾಂಗ್ರೆಸ್ ಪಾಠ ಕಲಿತಿದೆ ಅಂದುಕೊಂಡಿದ್ದೆವು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಆದ್ರೂ ಬುದ್ಧಿ ಕಲಿತಿಲ್ಲ. SCPTSP ಹಣವನ್ನು ಡೈವರ್ಟ್ ಮಾಡಿಕೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರೈತರ ಬಗ್ಗೆ ಕಾಳಜಿ ಇದ್ರೆ ಪರಿಹಾರ ಕೊಡಬಹುದಿತ್ತು. ಅಧಿವೇಶನ ಬಂದಿದೆ ಅಂತ 2 ಸಾವಿರ ಕೊಡುವ ನಾಟಕ ಆಡ್ತಿದೆ. ಇದು ತಿರುಗು ಬಾಣ ಆಗಲಿದೆ. ಮತದಾರರು ಉತ್ತರ ಕೊಡಲಿದ್ದಾರೆ. ಇವರಿಗೆ ಯಾರ ಬಗ್ಗೆಯೂ ಚಿಂತೆ ಇಲ್ಲ. ಸರ್ಕಾರ ಬಂದು ಇಲ್ಲಿಯವರೆಗೂ ಯಾವುದೇ ಘೋಷಣೆ ಮಾಡಿಲ್ಲ. ಇಂತ ಸರ್ಕಾರ ಇನ್ನೊಂದಿಲ್ಲ ಎಂದು ವಿಜಯೇಂದ್ರ ಟೀಕಿಸಿದ್ದಾರೆ.

ಇದನ್ನೂ ಓದಿ:ರಾಜ್ಯದ 63 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ

Last Updated : Dec 5, 2023, 5:49 PM IST

ABOUT THE AUTHOR

...view details