ಕರ್ನಾಟಕ

karnataka

ETV Bharat / state

ಲಾಕ್​ಡೌನ್ ಷರತ್ತು ಉಲ್ಲಂಘನೆ: ಗರ್ಭಿಣಿ, ಮಕ್ಕಳು ಸೇರಿ ಎಂಟು ಮಂದಿ ವಿರುದ್ಧ ಎಫ್​ಐಆರ್​

ಲಾಕ್​ಡೌನ್ ನಿಯಮ ಉಲ್ಲಂಘನೆ ಮುರಿದ ಹಿನ್ನೆಲೆ ಕಲಬುರಗಿ ಜಿಲ್ಲೆಯಲ್ಲಿ ಗರ್ಭಿಣಿ, ಆಕೆಯ ಮಕ್ಕಳು, ಪತಿ ಹಾಗೂ ಪೋಷಕರು ಸೇರಿದಂತೆ ಒಟ್ಟು ಎಂಟು ಜನರ ವಿರುದ್ಧ ದೂರು ದಾಖಲಾಗಿದೆ.

Lockdown rule violation: Complaint filed against eight people
ಸಂಗ್ರಹ ಚಿತ್ರ

By

Published : Apr 20, 2020, 10:24 PM IST

ಕಲಬುರಗಿ: ಲಾಕ್​ಡೌನ್ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆ ಗರ್ಭಿಣಿ, ಆಕೆಯ ಗಂಡ ಹಾಗೂ ಮಕ್ಕಳ ಮೇಲೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರು ಪ್ರತಿ

ಕಮಲಾಪುರ ತಾಲೂಕಿನ ಗೊಬ್ಬುರವಾಡಿ ನಿವಾಸಿಯಾದ ತುಂಬು ಗರ್ಭಿಣಿ, ಆಕೆಯ ಮಕ್ಕಳು, ಪತಿ ಹಾಗೂ ಪೋಷಕರು ಸೇರಿ ಒಟ್ಟು ಮಂದಿ ಜನರ ವಿರುದ್ಧ ಲಾಕ್​ಡೌನ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

ದೂರು ಪ್ರತಿ

ಗರ್ಭಿಣಿಯು, ಆಕೆಯ ಪತಿ ಹಾಗೂ ಮಕ್ಕಳೊಂದಿಗೆ ದುಡಿಮೆಗಾಗಿ ಹೈದರಾಬಾದ್​ಗೆ ಹೋಗಿದ್ದರು. ಹೆರಿಗೆಗಾಗಿ ತೆಲಂಗಾಣ ಪೊಲೀಸರಿಂದ ಪಾಸ್ ಪಡೆದು ವಾಪಸ್ ಬಂದಿದ್ದರು. ಟಂಟಂನಲ್ಲಿ ಗರ್ಭಿಣಿ ಸೇರಿ ಎಂಟು ಜನ ಊರಿಗೆ ವಾಪಸ್ ಆಗಿದ್ದರು. ಕಮಲಾಪುರ ಆರೋಗ್ಯ ಇಲಾಖೆ ಅಧಿಕಾರಿಗಳು ಇವರನ್ನು ಹೋಂ ಕ್ವಾರಂಟೈನ್ ಮಾಡಿದ್ದರು. ಆದರೆ, ಮರುದಿನ ಗರ್ಭಿಣಿಯ ಪತಿ ಮತ್ತು ತಾಯಿ ಸಮೀಪದ ಬೋಳೆವಾಡ ಗ್ರಾಮಕ್ಕೆ ತೆರಳಿದ್ದರು. ವಿಷಯ ತಿಳಿದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಗರ್ಭಿಣಿಯನ್ನೂ ಸೇರಿಸಿಕೊಂಡು ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರು ಪ್ರತಿ

ಗರ್ಭಿಣಿಯ ಪತಿ, ತಾಯಿ ಮತ್ತಿತರರನ್ನು ಕಮಲಾಪುರದ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಹೆರಿಗೆ ದಿನಗಳು ಹತ್ತಿರವಿದ್ದಾಗ ಈ ರೀತಿ ಮಾಡಿರುವುದಕ್ಕೆ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.

ABOUT THE AUTHOR

...view details