ಕಲಬುರಗಿ: ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಮಾನ ನಿಲ್ದಾಣಕ್ಕೆ ಅಮೋಘವರ್ಷ ನೃಪತುಂಗ ಎಂದು ಹೆಸರಿಡುವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಲಬುರಗಿ ವಿಮಾನ ನಿಲ್ದಾಣಕ್ಕೆ ಅಮೋಘವರ್ಷ ನೃಪತುಂಗನ ಹೆಸರಿಡುವಂತೆ ಒತ್ತಾಯ - ಕನ್ನಡ ಮೊದಲ ಉಪಲಬ್ಧ ಗ್ರಂಥ
ಕಲಬುರಗಿ ಜಿಲ್ಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವಿಮಾನ ನಿಲ್ದಾಣಕ್ಕೆ ಅಮೋಘವರ್ಷ ನೃಪತುಂಗ ಎಂದು ಹೆಸರಿಡುವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ನವ ನಿರ್ಮಾಣ ಸೇನೆ ನೇತೃತ್ವದಲ್ಲಿ ಪ್ರತಿಭಟನೆ
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸೇನೆ ಕಾರ್ಯಕರ್ತರು, ನೂತನ ವಿಮಾನ ನಿಲ್ದಾಣಕ್ಕೆ ಅಮೋಘವರ್ಷನ ಹೆಸರಿಟ್ಟು ಆತನ ಕೊಡುಗೆಯನ್ನು ಸ್ಮರಿಸಬೇಕು. ರಾಷ್ಟ್ರಕೂಟರ ದೊರೆಯಾಗಿದ್ದ ಅಮೋಘವರ್ಷ ನೃಪತುಂಗನ ಕಾಲದಲ್ಲಿಯೇ ಕನ್ನಡ ಮೊದಲ ಉಪಲಬ್ಧ ಗ್ರಂಥ ವಡ್ಡಾರಾಧನೆ ರಚನೆಯಾಗಿತ್ತು. ಕನ್ನಡ ನಾಡನ್ನು ನೇಪಾಳದವರೆಗೂ ವಿಸ್ತರಿಸಿದ ಕೀರ್ತಿ ಆತನನಿಗೆ ಸಲ್ಲುತ್ತದೆ. ಹೀಗಾಗಿ ಅವರ ಹೆಸರನ್ನೇ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.