ಕಲಬುರಗಿ:ದೇಶಾದ್ಯಂತ ಎರಡನೇ ಹಂತದ ಲಾಕ್ ಡೌನ್ ಘೋಷಣೆಯಾಗಿದೆ. ಆದ್ರೆ ಕಲಬುರಗಿಯಲ್ಲಿ ಮಾತ್ರ ಲಾಕ್ಡೌನ್ ಆದೇಶಕ್ಕೆ ಜನ ಕ್ಯಾರೇ ಎನ್ನುತ್ತಿಲ್ಲ.
ಕಲಬುರಗಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಲಾಕ್ಡೌನ್ ಪಾಲಿಸದ ಜನ!
ಲಾಕ್ ಡೌನ್ ನಡುವೆ ಕಲಬುರಗಿಯ ಮಾರುಕಟ್ಟೆಯಲ್ಲಿ ಜನ ದಿನಸಿ ಖರೀದಿಗೆ ಜನ ಮುಗಿಬಿದ್ದಿರೋ ದೃಶ್ಯಗಳು ಕಂಡುಬಂದವು. ವಾಹನ ಸಂಚಾರವೂ ಹೆಚ್ಚಾಗಿತ್ತು.
ಲಾಕ್ಡೌನ್ ಪಾಲನೆ ಇಲ್ಲವೇ ಇಲ್ಲ
ನಗರದ ಸೂಪರ್ ಮಾರುಕಟ್ಟೆಯಲ್ಲಿ ಜನ ದಿನಸಿ ಖರೀದಿಗೆ ಜನ ಮುಗಿಬಿದ್ದಿರೋ ದೃಶ್ಯಗಳು ಕಂಡುಬಂದಿವೆ. ವಾಹನ ಸಂಚಾರವೂ ಹೆಚ್ಚಾಗಿತ್ತು. ಆಳಂದ ಪಟ್ಟಣದಲ್ಲಿಯೂ ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ಏಪ್ರಿಲ್ 20 ರವರೆಗೆ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿ ಇರಲಿದೆ ಎಂದು ಎಂದು ಪ್ರಧಾನಿ ಹೇಳಿದ್ದಾರೆ. ಇನ್ನೊಂದೆಡೆ ಕಲಬುರಗಿ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಆದ್ರೂ ಇಲ್ಲಿನ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ, ಜನರ ಈ ವರ್ತನೆ ಆತಂಕಕ್ಕೆ ಕಾರಣವಾಗಿದೆ.