ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಮಹಾಮಾರಿ ಭೀತಿ... ಐವರಿಗೆ ಶಂಕಿತ ಡೆಂಗ್ಯೂ ಜ್ವರ!

ಕಲಬುರಗಿಯ ಚಿತ್ತಾಪುರ ತಾಲೂಕಿನ ಕೆಲ ಗ್ರಾಮಗಳ ಜನರಲ್ಲಿ ಡೆಂಗ್ಯೂ ಭೀತಿ ಆವರಿಸಿದೆ. ಸುಮಾರು ಐವರಲ್ಲಿ ಶಂಕಿತ ಡೆಂಗ್ಯೂ ಜ್ವರ ಕಂಡು ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

By

Published : Sep 25, 2019, 2:47 AM IST

ಕಲಬುರಗಿಯ ಐವರಿಗೆ ಶಂಕಿತ ಡೆಂಗ್ಯೂ ಜ್ವರ

ಕಲಬುರಗಿ:ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಹಾಗೂ ಹಲಕಟ್ಟಿ ಗ್ರಾಮದ ಜನರಲ್ಲಿ ಡೆಂಗ್ಯೂ ಭೀತಿ ಆವರಿಸಿದೆ.

ಗ್ರಾಮದ ಸುಮಾರು ಐವರಲ್ಲಿ ಶಂಕಿತ ಡೆಂಗ್ಯೂ ಜ್ವರ ಕಂಡು ಬಂದಿದೆ. ಅವರನ್ನು ಸ್ಥಳೀಯ ಹಾಗೂ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇವರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ಬಳಿಕ ಈ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ. ಸದ್ಯ ರೋಗದಿಂದ ಬಳಲುತ್ತಿರುವ ಐವರು ಯುವಕರಾಗಿದ್ದು, ಕುಟುಂಬಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ABOUT THE AUTHOR

...view details