ಕರ್ನಾಟಕ

karnataka

ETV Bharat / state

ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ್ರೆ ವಾಂತಿ ಆಗುತ್ತೆ: ಬಸವರಾಜ ಹೊರಟ್ಟಿ

ಕಲಬುರಗಿಯಲ್ಲಿ ಜೆಡಿಎಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ್ರೆ ವಾಂತಿ ಆಗುತ್ತೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

By

Published : Jan 20, 2020, 3:50 PM IST

Basavaraja Horatti
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ

ಕಲಬುರಗಿ:ಜೆಡಿಎಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ್ರೆ ವಾಂತಿ ಆಗುತ್ತೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಜೆಡಿಎಸ್- ಕಾಂಗ್ರೆಸ್​​ನಿಂದ ಮತ್ತಷ್ಟು ಶಾಸಕರನ್ನು ಬಿಜೆಪಿ ಸೆಳೆಯುವ ಪ್ರಯತ್ನ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ್ರೆ ವಾಂತಿ ಆಗುತ್ತೆ ಎಂದು ಪಕ್ಷಾಂತರ ಕಾರ್ಯಾಚರಣೆ ಮುಂದುವರೆಸುವುದು ಸರಿಯಲ್ಲ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ಸಂದೇಶ ನೀಡಿದರು. ನಮ್ಮವರು ಮಾಡಿದ ತಪ್ಪಿನಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದ್ರೆ ಈಗ ಬಿಜೆಪಿಗೆ ಸೇರುವ ಶಾಸಕರಿಗೆ ಯಾವುದೇ ಗೌರವ ಸಿಗೋದಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ

ಸಚಿವ ಸ್ಥಾನದ ವಿಚಾರದಲ್ಲಿ ಮೂಲ ಬಿಜೆಪಿಗರಿಂದ ಅಸಮಾಧಾನದ ವಿಷಯವಾಗಿ ಮಾತನಾಡಿದ ಅವರು, ಬಿಜೆಪಿ ಒಂದೇ ಅಲ್ಲ, ಎಲ್ಲಾ ಪಕ್ಷದಲ್ಲೂ ಅಸಮಾಧಾನ ಅನ್ನೋದು ಸಾಮಾನ್ಯ. ಬಿಜೆಪಿಯಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಹೀಗಾಗಿ ಎಲ್ಲರು ಶಾಂತವಾಗಿದ್ದಾರೆ. ಕಾಂಗ್ರೆಸ್ ಅಥವಾ ಜೆಡಿಎಸ್​​ನಲ್ಲಿ ಹಾಗಾಗಿದ್ರೆ ಏನ್ ಬೇಕಾದ್ರು ಆಗ್ತಿತ್ತು. 30 ವರ್ಷ ಬಿಜೆಪಿಯಲ್ಲಿ ಕಸ ಹೊಡೆದವರು ಮಂತ್ರಿ ಆಗದೆ ಹೋದ್ರೆ ನೋವಾಗುವುದು ಸಾಮಾನ್ಯ. ಯಾರೋ ಬೆಳೆದ ಬೆಳೆ ಯಾರದೋ ಪಾಲಾಗಿದೆ ಎನ್ನುವಂತಾಗಿದೆ ಮೂಲ ಬಿಜೆಪಿಗರ ಪರಿಸ್ಥಿತಿ ಎಂದರು.

ಇದೆ ವೇಳೆ ಜೆಡಿಎಸ್​ನೊಂದಿಗೆ ತಮ್ಮ ಮುನಿಸು ವಿಚಾರವಾಗಿ ಮಾತನಾಡಿದ ಹೊರಟ್ಟಿ, ಜೆಡಿಎಸ್ ಅಧಿಕಾರವಿದ್ದಾಗ ನಮ್ಮನ್ನ ಮಾತಾಡಿಸಲಿಲ್ಲ. ಚುನಾವಣೆಗೆ ಉಪಯೋಗ ಮಾಡಿಕೊಂಡು ಸುಮ್ಮನಾದರು. ಹಾಗಾಗಿ ಎಂಎಲ್​​​ಸಿಗಳು ಜೆಡಿಎಸ್ ವಿರುದ್ಧ ಅಸಮಾಧಾನ ಹೊರಹಾಕಿದ್ವಿ. ಆದ್ರೆ ದೇವೇಗೌಡ ಅವರು ಕರೆದು ಎಲ್ಲಾ ಸರಿಪಡಿಸುವುದಾಗಿ ಹೇಳಿ, ಮಕ್ಕಳು ಅಳುವಾಗ ಚಾಕೋಲೆಟ್ ಕೊಟ್ಟು ಹೇಗೆ ಸಮಾಧಾನ ಮಾಡ್ತಾರೋ ಹಾಗೆ ಸಮಾಧಾನ ಮಾಡಿದ್ದಾರೆ ಎಂದರು.

ABOUT THE AUTHOR

...view details