ಕಲಬುರಗಿ:ಡಿಸಿಎಂ ಗೋವಿಂದ ಕಾರಜೋಳ ಅವರು ಕಲಬುರಗಿಗೆ ಆಗಮಿಸಿದ ವೇಳೆ ದಲಿತ ಹೋರಾಟಗಾರ ಮೇಲೆ ವಿನಾಕಾರಣ ಪೊಲೀಸರಿಂದ ಹಲ್ಲೆ ಮಾಡಿಸಲು ಮುಂದಾಗಿದಲ್ಲದೇ, ಅಸಭ್ಯವಾಗಿ ವರ್ತಿಸಿದ್ದಾರೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಕಾರ್ಯದರ್ಶಿ ದಶರಥ ಕಲಗುರ್ತಿ ಆರೋಪಿಸಿದ್ದಾರೆ.
ದಲಿತ ಹೋರಾಟಗಾರರ ಮೇಲೆ ಹಲ್ಲೆ ಮಾಡಿಸುವ ಯತ್ನ: ಡಿಸಿಎಂ ವಿರುದ್ಧ ದಸಂಸ ಆರೋಪ
ಡಿಸಿಎಂ ಗೋವಿಂದ ಕಾರಜೋಳ ಅವರು ಕಲಬುರಗಿಗೆ ಆಗಮಿಸಿದ ವೇಳೆ ದಲಿತ ಹೋರಾಟಗಾರ ಮೇಲೆ ವಿನಾಕಾರಣ ಪೊಲೀಸರಿಂದ ಹಲ್ಲೆ ಮಾಡಿಸಲು ಮುಂದಾಗಿದ್ದಾರೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಕಾರ್ಯದರ್ಶಿ ದಶರಥ ಕಲಗುರ್ತಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಶರಥ ಕಲಗುರ್ತಿ, ಎ ಜೆ ಸದಾಶಿವ ಆಯೋಗ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲು ಹೋದ ವೇಳೆ ದಲಿತ ಹೋರಾಟಗಾರರ ಮೇಲೆ ಪೋಲಿಸರು ಹಲ್ಲೆ ಮಾಡಿಸಲು ಮುಂದಾಗಿದ್ದಲ್ಲದೇ, ಮನವಿ ಸ್ವೀಕರಿಸದೇ ಹೋರಾಟಗಾರರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಗೊಂವಿಂದ ಕಾರಜೋಳ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು, ಇಲ್ಲವಾದರೆ ಮುಂಬರುವ ದಿನಗಳಲ್ಲಿ ಕಾರಜೋಳ ಅವರು ಕಲಬುರಗಿಗೆ ಬಂದಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸುವುದಾಗಿದೆ ಎಂದು ಎಚ್ಚರಿಕೆ ನೀಡಿದರು.