ಕರ್ನಾಟಕ

karnataka

ETV Bharat / state

ಚೌಕೀದಾರ್‌ ಚೋರ್ ಹೈ ಎಂದು ಘೋಷಣೆ ಕೂಗಿದ ಕೈಪಡೆ- ಡಾ. ಉಮೇಶ್‌ ಜಾಧವ್‌ಗೆ ಮುಜುಗರ - kannada news

ಡಾ. ಬಿ.ಆರ್‌ ಅಂಬೇಡ್ಕರ್ ಜಯಂತಿ ಹಿನ್ನಲೆಯಲ್ಲಿ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಬಂದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್‌ ಜಾಧವ್‌ಗೆ ಚೌಕೀದಾರ್ ಚೋರ್ ಹೈ ಎಂದು ಘೋಷಣೆ ಕೂಗಿದ ಕಾಂಗ್ರೆಸ್‌ ಕಾರ್ಯಕರ್ತರು.

ಬಿಜೆಪಿ ಅಭ್ಯರ್ಥಿ ಉಮೆಶ ಜಾಧವ ವಿರುದ್ಧ ಹಾಗು ಚೌಕಿದಾರ್ ಚೋರ್ ಹೈ ಎಂದು ಘೋಷಣೆ

By

Published : Apr 14, 2019, 6:15 PM IST

ಕಲಬುರಗಿ:ರಾಜಕೀಯದಲ್ಲಿ ಎಟು- ಎದಿರೇಟು ಸಾಮಾನ್ಯ. ಕಾಂಗ್ರೆಸ್‌ ನಾಯಕರ ಮುಂದೆ ಮೋದಿ ಮೋದಿ ಅಂತಾ ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರು ಇರಿಸುಮುರಿಸು ಸೃಷ್ಟಿಸುತ್ತಿದ್ದರು. ಈಗ ಅದೇ ತಂತ್ರವನ್ನ ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದು, ಚೌಕೀದಾರ್‌ ಚೋರ್‌ ಹೈ, ಚೌಕೀದಾರ್‌ ಚೋರ್‌ ಹೈ ಅಂತಾ ಘೋಷಣೆ ಕೂಗ್ತಾ ಬಿಜೆಪಿ ನಾಯಕರಿಗೆ ಟಾಂಗ್‌ ಕೊಡುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿರುದ್ಧ ಹಾಗು ಚೌಕೀದಾರ್ ಚೋರ್ ಹೈ ಎಂದು ಘೋಷಣೆ

ಜಗತ್ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಡಾಯ ಉಮೇಶ್‌ ಜಾಧವ್‌ ತಮ್ಮ ಬೆಂಬಲಿಗರೊಂದಿಗೆ ಮಾಲಾರ್ಪಣೆ ಮಾಡಲು ಬಂದಿದ್ದರು. ತಾಂಡಾಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಅಡ್ಡಿಪಡಿಸಿದ್ದ ಹಿನ್ನೆಲೆಯಲ್ಲಿ ಇವತ್ತು ವಿವಿಧ ದಲಿತ ಸಂಘಟನೆಗಳ ಯುವಕರು ಜಾಧವ್ ಎದುರು ಚೌಕೀದಾರ್ ಚೋರ್ ಹೈ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಮಲ್ಲಿಕಾರ್ಜುನ ಖರ್ಗೆ ಪರ ಜಯಘೋಷ ಕೂಗಿದರು. ಘೋಷಣೆಗಳ ನಡುವೆಯೇ ಅಂಬೇಡ್ಕರ್ ಪುತ್ಥಳಿಗೆ ಉಮೇಶ್ ಜಾಧವ್ ಮಾಲಾರ್ಪಣೆ ಮಾಡಿ ತೆರಳಿದರು.

ಇತ್ತೀಚೆಗಷ್ಟೇ ತಾಂಡಾಗಳಲ್ಲಿ ಕಾಂಗ್ರೆಸ್ ನಾಯಕರು ಪ್ರಚಾರಕ್ಕೆ ತೆರಳಿದಾಗ ಲಂಬಾಣಿ ಸಮುದಾಯದವರು ಪ್ರಚಾರಕ್ಕೆ ಅಡ್ಡಿಪಡಿಸಿದ್ದರು. ಇಂದು ಘೋಷಣೆ ಕೂಗಿ ಪ್ರತೀಕಾರ ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details