ಕಲಬುರಗಿ: ಬಯಲು ಬಹಿರ್ದೆಸೆಗೆ ಹೋಗಿದ್ದ ಮಹಿಳೆಯ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಅಫ್ಜಲ್ಪುರ ತಾಲೂಕಿನ ನೀಲೂರ ಗ್ರಾಮದಲ್ಲಿ ನಡೆದಿದೆ.
ಬಹಿರ್ದೆಸೆಗೆ ಹೋಗಿದ್ದ ಮಹಿಳೆಯ ಬರ್ಬರ ಕೊಲೆ: ಮುಳ್ಳಿನ ಕಂಟೆಯಲ್ಲಿ ಶವ ಪತ್ತೆ - ಅಫಜಲಪುರ ತಾಲೂಕಿನ ನೀಲೂರು ಗ್ರಾಮ
ಕಲಬುರಗಿಯ ಅಫ್ಜಲ್ಪುರ ತಾಲೂಕಿನ ನೀಲೂರು ಗ್ರಾಮದ ಮಹಿಳೆವೋರ್ವಳ ಬರ್ಬರ ಕೊಲೆಯಾಗಿದೆ. ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
http://10.10.50.85//karnataka/21-August-2019/kn-klb-02-lady-danger-murder-9023578_21082019152926_2108f_1566381566_287.jpg
ನೀಲೂರ ಗ್ರಾಮದ 36 ವರ್ಷ ವಯಸ್ಸಿನ ಮಹಿಳೆ ಹತ್ಯೆಗೀಡಾಗಿದ್ದಾಳೆ. ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಮಹಿಳೆಯ ಕುತ್ತಿಗೆ ಕೊಯ್ದು, ಬಳಿಕ ತಲೆ ಮೇಲೆ ಕಲ್ಲು ಹಾಕಿ ಹತ್ಯೆಗೈದಿದ್ದಾರೆ. ಶವ ಅರೆನಗ್ನ ಸ್ಥಿತಿಯಲ್ಲಿ ಮುಳ್ಳುಕಂಟಿಯಲ್ಲಿ ಪತ್ತೆಯಾಗಿದೆ.
ಅತ್ಯಾಚಾರವೆಸಗಿ ಹತ್ಯೆಗೈದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಕೈಗೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ರೇವೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.