ಕರ್ನಾಟಕ

karnataka

ETV Bharat / state

ಕಲಬುರಗಿ : ಕಲ್ಲು ಗಣಿಯಲ್ಲಿ ಆಯತಪ್ಪಿ ಬಿದ್ದು ಬಾಲಕ ಸಾವು.. - Boy died in stone quarry in kalaburagi

ಮಳೆ ನೀರಿನಲ್ಲಿ ಮುಳುಗಿದ್ದ ಹಾಸುಗಲ್ಲು ಕತ್ತರಿಸುವ ವಿದ್ಯುತ್ ಕೇಬಲ್ ಎಳೆಯುವಾಗ ಗಣಿಯಲ್ಲಿ ಕಾಲುಜಾರಿ ಬಿದ್ದು ದುರ್ಘಟನೆ ಸಂಭವಿಸಿದೆ. ಈ ಕುರಿತು ವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Mangesh Methun Jadhav (08)
ಮಂಗೇಶ್ ಮೀಥೂನ್ ಜಾಧವ್ (08)

By

Published : Aug 20, 2021, 6:39 PM IST

ಕಲಬುರಗಿ :ಕಲ್ಲು ಗಣಿಯಲ್ಲಿ ಆಯತಪ್ಪಿ ಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಬಸವನಗುಡಿ ಬಡಾವಣೆಯಲ್ಲಿ ನಡೆದಿದೆ.

ತಂದೆಯೊಂದಿಗೆ ಹೋದಾಗ ನೀರು ತುಂಬಿದ ಗಣಿಗೆ ಬಿದ್ದು ಈ ಅವಘಡ ಸಂಭವಿಸಿದೆ. ವಾಡಿ ಪಟ್ಟಣದ 3ನೇ ತರಗತಿಯಲ್ಲಿ ಓದುತ್ತಿದ್ದ ಮಂಗೇಶ್ ಮಿಥೂನ್ ಜಾಧವ್ (08) ಎಂಬಾತ ಮೃತ ಬಾಲಕ ಎಂದು ಗುರುತಿಸಲಾಗಿದೆ.

ಮಳೆ ನೀರಿನಲ್ಲಿ ಮುಳುಗಿದ್ದ ಹಾಸುಗಲ್ಲು ಕತ್ತರಿಸುವ ವಿದ್ಯುತ್ ಕೇಬಲ್ ಎಳೆಯುವಾಗ ಗಣಿಯಲ್ಲಿ ಕಾಲುಜಾರಿ ಬಿದ್ದು ದುರ್ಘಟನೆ ಸಂಭವಿಸಿದೆ. ಈ ಕುರಿತು ವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಸಿಎಂ ಭೇಟಿಯಾದ ಶೋಭಾ ಕರಂದ್ಲಾಜೆ : ಕೃಷಿ ಕ್ಷೇತ್ರದ ಅಭಿವೃದ್ಧಿ ಕುರಿತು ಸಮಾಲೋಚನೆ

ABOUT THE AUTHOR

...view details