ಕಲಬುರಗಿ:ಜಿಟಿಜಿಟಿ ಮಳೆಯ ನಡುವೆ ಆಕಸ್ಮಿಕ ಬೆಂಕಿ ತಗುಲಿ ದ್ವಿಚಕ್ರ ವಾಹನ ಹೊತ್ತಿ ಉರಿದ ಘಟನೆ ಕಮಲಾಪುರ ತಾಲೂಕಿನ ಕಲಮುಡ ಗ್ರಾಮದಲ್ಲಿ ನಡೆದಿದೆ.
ತುಂತುರು ಮಳೆಯಲ್ಲಿಯೂ ಆಕಸ್ಮಿಕವಾಗಿ ಹೊತ್ತಿ ಉರಿದ ದ್ವಿಚಕ್ರ ವಾಹನ - ಸುಭಾಶ್ ರಾಥೋಡ್
ಜಿಟಿಜಿಟಿ ಮಳೆಯ ನಡುವೆ ಆಕಸ್ಮಿಕ ಬೆಂಕಿ ತಗುಲಿ ದ್ವಿಚಕ್ರ ವಾಹನ ಹೊತ್ತಿ ಉರಿದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲಮುಡ ಗ್ರಾಮದಲ್ಲಿ ನಡೆದಿದೆ.
ತುಂತುರು ಮಳೆಯಲ್ಲಿಯೂ ಆಕಸ್ಮಿಕವಾಗಿ ಹೊತ್ತಿ ಉರಿದ ದ್ವಿಚಕ್ರ ವಾಹನ
ಕಲಮುಡ ನವನಾಯಕ್ ತಾಂಡಾ ನಿವಾಸಿ ಸುಭಾಶ್ ರಾಥೋಡ್ ಎಂಬುವರಿಗೆ ಸೇರಿದ ಬೈಕನ್ನು ಚಾಲನೆ ಮಾಡಲೆಂದು ಕಿಕ್ ಹೊಡೆಯುವಾಗ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕ್ಷಣಾರ್ಧದಲ್ಲಿ ಧಗಧಗಿಸಲು ಆರಂಭಿಸಿದ್ದು, ಗಾಬರಿಗೊಂಡ ಗ್ರಾಮಸ್ಥರು ನೀರು, ಮಣ್ಣು, ಹಸಿ ಬಟ್ಟೆ ಹಾಕಿ ಬೆಂಕಿ ನಂದಿಸಿದ್ದಾರೆ.
ಆದ್ರೆ ಜಿಟಿಜಿಟಿ ಮಳೆ ಇದ್ದರೂ ಅಗ್ನಿ ಅವಘಡ ನಡೆದು ಬೈಕ್ ಸುಟ್ಟಿರುವುದು ಗ್ರಾಮಸ್ಥರಲ್ಲಿ ಆಶ್ಚರ್ಯ ಮೂಡಿಸಿದೆ. ಕಮಲಾಪೂರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.