ಹಾವೇರಿ: ನಾನು ಎಲ್ಲರೊಂದಿಗೆ ಅಡ್ಜಸ್ಟ್ ಆಗಿದ್ದರೆ ನೀವ್ಯಾರು ಮುಖ್ಯಮಂತ್ರಿ ಆಗುತ್ತಿರಲಿಲ್ಲ ನಾನೇ ಸಿಎಂ ಆಗಿರುತ್ತಿದ್ದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ.
ಶಿಗ್ಗಾಂವಿ ಪಟ್ಟಣದಲ್ಲಿ ಕಿತ್ತೂರು ರಾಣೆ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಎಲ್ಲಾರೊಂದಿಗೆ ಅಡ್ಜಸ್ಟ್ ಆದರೇ ನಾನು ಮುಖ್ಯಮಂತ್ರಿ ಆಗುತ್ತಿದೆ. ಇನ್ನು, ಪಂಚಮಸಾಲಿ ಮೀಸಲಾತಿ ಕುರಿತಂತೆ ನಿನ್ನೆ ಸಿಎಂ ಬೊಮ್ಮಾಯಿಯವರು ನಮ್ಮ ಸಮಾಜದ ಸಚಿವ ಸಿ.ಸಿ. ಪಾಟೀಲರನ್ನು ಕರೆದು ಮತ್ತೊಂದು ಅವಕಾಶ ಕೇಳಿದ್ದಾರೆ.
ಧ್ವನಿಯಿಲ್ಲದ ಸಮಾಜಗಳಿಗೆ ನಮ್ಮ ಸ್ವಾಮೀಜಿ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಯತ್ನಾಳ್ ತಿಳಿಸಿದರು. ಮುಂದಿನ ಹೋರಾಟದ ಕುರಿತು ಇವತ್ತು ನಿರ್ಣಯ ಮಾಡುತ್ತೇವೆ. ಮುಂದಿನ ಎರಡು ತಿಂಗಳಲ್ಲಿ 25 ಲಕ್ಷ ಜನರನ್ನು ಸೇರಿಸಿ ನಿರ್ಣಯ ಮಾಡುತ್ತೇವೆ ಎಂದು ಯತ್ನಾಳ್ ತಿಳಿಸಿದರು.