ಕರ್ನಾಟಕ

karnataka

ETV Bharat / state

ಹಾವೇರಿ ಜಿಲ್ಲೆಯಲ್ಲಿ ತೋಳ ದಾಳಿ : ಹತ್ತಕ್ಕೂ ಹೆಚ್ಚು ಜನರಿಗೆ ಗಾಯ

ತೋಳದ ಹಾವಳಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ತೋಳ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನಾಯಿಗಳು ತೋಳದ ಮೇಲೆ ದಾಳಿ ಮಾಡಲಾರಂಭಿಸುತ್ತಿದ್ದಂತೆ ತೋಳ ಓಡಿ ಹೋಗಿದೆ ಎನ್ನಲಾಗಿದೆ..

By

Published : Aug 21, 2021, 7:14 PM IST

ತೋಳ ದಾಳಿ
ತೋಳ ದಾಳಿ

ಹಾವೇರಿ :ತೋಳವೊಂದು ಜನ ಮತ್ತು ಜಾನುವಾರುಗಳ ಮೇಲೆ ದಾಳಿ ಮಾಡಿರುವ ಘಟನೆ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ನಡೆದಿದೆ. ತೋಳದ ದಾಳಿಗೆ 10ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.

ಕಡಿಮೆ ದಾಳಿಗೊಳಗಾದವರಿಗೆ ಗುತ್ತಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ತೀವ್ರವಾಗಿ ಗಾಯಗೊಂಡ ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಲ್ಲದೆ ಸಿಕ್ಕ ಸಿಕ್ಕ ಜಾನುವಾರುಗಳ ಮೇಲೆ ಸಹ ತೋಳ ದಾಳಿ ಮಾಡಿದ್ದು, ನಾಲ್ಕು ಜಾನುವಾರುಗಳು ಗಾಯಗೊಂಡಿವೆ. ಗುಡ್ಡಪ್ಪ ಕೊಪ್ಪದ, ಸಂತೋಷ ಬುರುಡಿ, ನಿರ್ಮಲಾ ಹರಿಜನ ಮತ್ತು ಚೌಡವ್ವ ಹರಿಜನ ಮತ್ತು ಮಲ್ಲಮ್ಮಗೆ ಗಾಯಗಳಾಗಿವೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಸಹ ತೋಳ ದಾಳಿ ಮಾಡಿದೆ.

ತೋಳದ ಹಾವಳಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ತೋಳ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನಾಯಿಗಳು ತೋಳದ ಮೇಲೆ ದಾಳಿ ಮಾಡಲಾರಂಭಿಸುತ್ತಿದ್ದಂತೆ ತೋಳ ಓಡಿ ಹೋಗಿದೆ ಎನ್ನಲಾಗಿದೆ.

ಇದನ್ನೂ ಓದಿ : ಹೊತ್ತಿ ಉರಿದ ಬಸ್​​: ಅದೃಷ್ಟವಶಾತ್​ ಪ್ರಯಾಣಿಕರೆಲ್ಲರೂ ಬಚಾವ್

ABOUT THE AUTHOR

...view details