ಹಾವೇರಿ: ಎಲ್ಲಾ ಇಲಾಖೆಗಳಿಂದ ಆದಾಯ ಬರುತ್ತೆ, ಆದರೆ ಪಶುಸಂಗೋಪನಾ ಇಲಾಖೆಯಲ್ಲಿ ಅದಾಯವಿಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ತಮ್ಮ ಇಲಾಖೆಗೆ ಆದಾಯ ಬರುವಂತೆ ಮಾಡಲು ಖಾಯಂ ಸ್ವರೂಪ ಪಶುಲೋಕಮೇಳ ಮಾಡುತ್ತಿರುವುದಾಗಿ ತಿಳಿಸಿದರು.
ಪಶುಸಂಗೋಪನಾ ಇಲಾಖೆಯಲ್ಲಿ ಆದಾಯವಿಲ್ಲ: ಸಚಿವ ಪ್ರಭು ಚವ್ಹಾಣ್ ಬೆಂಗಳೂರಿನಲ್ಲಿ ನೂರು ಎಕರೆ ಜಮೀನಿನಲ್ಲಿ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮೇಳ ಮಾಡಲಾಗುತ್ತಿದ್ದು ಪ್ರವಾಸಿಗರನ್ನು ಅಕರ್ಷಿಸಲಿದೆ ಎಂದು ತಿಳಿಸಿದರು. ತಮ್ಮ ಇಲಾಖೆಯಿಂದ ಬೇರೆ ಇಲಾಖೆಗೆ ಹೋದ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಪ್ರತಿ ಜಿಲ್ಲೆಗೆ 5-7 ಸಾವಿರ ದನಗಳಿರುವ ಮಾದರಿ ಗೋಶಾಲೆ ತೆರೆಯಲಾಗುವುದು. ದೇಶದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ತಮ್ಮ ಇಲಾಖೆಯಲ್ಲಿ ಪ್ರಾಣ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.
ಕಳೆದ ಎರಡು ದಶಕಗಳಿಂದ ಇಲಾಖೆ ಸೂಕ್ತ ಸಿಬ್ಬಂದಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ತಮ್ಮ ಇಲಾಖೆಯಲ್ಲಿ 18 ಸಾವಿರ ವೈದ್ಯ ಹುದ್ದೆ ಖಾಲಿ ಇದ್ದು, ಹಂತ ಹಂತವಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು. ಸಿಎಂ ಬಸವರಾಜ್ ಬೊಮ್ಮಾಯಿ ಬಾಯಿಗುಣ ಸರಿಯಾಗಿದ್ದು ಕೋವಿಡ್ ಕಡಿಮೆಯಾಗುತ್ತಿದೆ. ಆದಷ್ಟು ಬೇಗ ಕೊರೊನಾ ಮುಕ್ತ ಕರ್ನಾಟಕವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಪಶು ಸಂಜೀವಿನಿ ಆ್ಯಂಬುಲೆನ್ಸ್ ಸೇವೆ 15 ಜಿಲ್ಲೆಗಳಲ್ಲಿ ಜಾರಿಗೆ ತಂದಿದ್ದು, ಉಳಿದ ಜಿಲ್ಲೆಗಳಲ್ಲಿ ಆದಷ್ಟು ಬೇಗ ಜಾರಿಗೆ ತರಲಾಗುವುದು. ಬಕ್ರೀದ್ ಸಮಯದಲ್ಲಿ ಇಲಾಖೆ ಆರರಿಂದ ಏಳುಸಾವಿರ ದನಗಳನ್ನು ರಕ್ಷಿಸಿದೆ ಎಂದರು.
ಇದನ್ನೂ ಓದಿ : ಟ್ಯಾಟೂ ಮೂಲಕ ಪೋಷಕರ ಮಡಿಲು ಸೇರಿದ ಮಾನಸಿಕ ಅಸ್ವಸ್ಥ ಬಾಲಕ