ಕರ್ನಾಟಕ

karnataka

ETV Bharat / state

ಕ್ಯಾಂಟರ್​ಗೆ ಕಾರ್ ಡಿಕ್ಕಿ: ಇಬ್ಬರ ಸಾವು, ಒಬ್ಬನಿಗೆ ಗಾಯ - ಕ್ಯಾಂಟರ್​ಗೆ ಕಾರ್ ಅಪಘಾತ

ಹಾವೇರಿ ಕಡೆಗೆ ಹೊರಟಿದ್ದ ಕಾರಿಗೆ ಹಿಂದಿನಿಂದ ಕ್ಯಾಂಟರ್​ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಒಬ್ಬ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಿಸ್ನಳ್ಳಿ ಗ್ರಾಮದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

car accident

By

Published : Feb 11, 2019, 12:30 PM IST

ಹಾವೇರಿ: ನಿಂತಿದ್ದ ಕ್ಯಾಂಟರ್​ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಒಬ್ಬ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಿಸ್ನಳ್ಳಿ ಗ್ರಾಮದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ನಾಗರಾಜ (37) ಇಂದುಧರ ಪಾಟೀಲ್​ (38) ಮೃತರು. ಘಟನೆಯಲ್ಲಿ ಪ್ರವೀಣ್​ ಕಲಾಲ್​ ಎಂಬ ವ್ಯಕ್ತಿ ಗಾಯಗೊಂಡಿದ್ದು, ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಹೊರಟಿದ್ದ ಕಾರಿಗೆ ಹಿಂದಿನಿಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ನಂತರ ಕಾರು ಮುಂದೆ ನಿಂತಿದ್ದ ಮತ್ತೊಂದು ಕ್ಯಾಂಟರ್​ಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.

ಘಟನಾ ಸ್ಥಳಕ್ಕೆ ಶಿಗ್ಗಾಂವಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details