ಕರ್ನಾಟಕ

karnataka

ETV Bharat / state

ಎಸ್​ಎಸ್​ಎಲ್​ಸಿ ಪರೀಕ್ಷೆಗಾಗಿ ಸಿದ್ಧಗೊಂಡ 15 ಪರೀಕ್ಷಾ ಕೇಂದ್ರಗಳು!

ರಾಜ್ಯದಲ್ಲಿ ಜೂ.25ರಿಂದ ಎಸ್​​ಎಸ್​ಎಲ್​ಸಿ ಪರೀಕ್ಷೆಗಳು ನಡೆಯಲಿದ್ದು, ಸಂಬಂಧಪಟ್ಟ ಇಲಾಖೆಗಳು ಸಿದ್ಧತೆಯಲ್ಲಿ ತೊಡಗಿವೆ. ಇನ್ನು ರಾಣೆಬೆನ್ನೂರಿನಲ್ಲಿ ಈ ಬಾರಿ 4,466 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದು. ಇದಕ್ಕಾಗಿ ತಾಲೂಕಿನಾದ್ಯಂತ 15 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.

By

Published : Jun 16, 2020, 4:59 AM IST

SSLC Exam
ರಾಣೆಬೆನ್ನೂರು: ಎಸ್​ಎಸ್​ಎಲ್​ಸಿ ಪರೀಕ್ಷೆಗಾಗಿ ಸಿದ್ಧಗೊಂಡ 15 ಪರೀಕ್ಷಾ ಕೇಂದ್ರಗಳು

ರಾಣೆಬೆನ್ನೂರು (ಹಾವೇರಿ):ಕೊರೊನಾ ಭಯದ ನಡುವೆ ಎಸ್ಎಸ್ಎಲ್​​​​ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಾಗೂ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಇನ್ನು ಜೂ.25 ರಂದು ಪರೀಕ್ಷೆ ನಡೆಸಲು ಎಲ್ಲಾ ರೀತಿಯ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಹಾಕಿಕೊಂಡಿದೆ.

ರಾಣೆಬೆನ್ನೂರು ತಾಲೂಕಿನಲ್ಲಿ ಒಟ್ಟು 4,466 ವಿದ್ಯಾರ್ಥಿಗಳಲ್ಲಿ 2,208 ಗಂಡು ಮಕ್ಕಳು ಮತ್ತು 2,258 ಹೆಣ್ಣು ಮಕ್ಕಳು ಈ ಬಾರಿ ಎಸ್​ಎಸ್ಎಲ್​ಸಿ ಪರೀಕ್ಷೆ ಬರೆಯುತ್ತಿದ್ದಾರೆ.

ಒಟ್ಟು 15 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ನಗರದಲ್ಲಿ 5 ಹಾಗೂ ಗ್ರಾಮೀಣ ಪ್ರದೇಶದಲ್ಲಿ 10 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.

ಈ ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸ್​ ಮಾಡಿಸಲಾಗಿದೆ ಎಂದು ಬಿಇಒ ಎನ್. ಶ್ರೀಧರ ತಿಳಿಸಿದರು. ಪರೀಕ್ಷೆ ಬರೆಯುತ್ತಿರುವ ಪ್ರತಿ ವಿದ್ಯಾರ್ಥಿಗೆ ದಾನಿಗಳು ನೀಡಿರುವ ಎರಡು ಮಾಸ್ಕ್​​ ನೀಡಲಾಗುತ್ತಿದೆ.

ಸರ್ಕಾರದ ವತಿಯಿಂದ ಯಾವುದೇ ಮಾಸ್ಕ್ ನೀಡಿಲ್ಲ. ಆದರೆ ಪ್ರತಿ ಪರೀಕ್ಷಾ ಕೇಂದ್ರಕ್ಕೆ 6 ಲೀಟರ್ ಸಾನಿಟೈಸರ್​ ಮತ್ತು ವಿದ್ಯಾರ್ಥಿಗಳನ್ನು ಪರೀಕ್ಷಿಸಲು ಒಂದು ಥರ್ಮೊ ಗನ್ ನೀಡಲಾಗಿದೆ‌ ಎಂದು ಮಾಹಿತಿ ನೀಡಿದರು.

ABOUT THE AUTHOR

...view details