ಕರ್ನಾಟಕ

karnataka

By

Published : Mar 3, 2022, 11:00 AM IST

Updated : Mar 3, 2022, 2:29 PM IST

ETV Bharat / state

ಉಕ್ರೇನ್​ನಲ್ಲಿ ಮೃತಪಟ್ಟ ನವೀನ್... ಮೂರನೇ ದಿನದ ಕಾರ್ಯ ನೆರವೇರಿಸಿದ ಕುಟುಂಬಸ್ಥರು

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಮೃತಪಟ್ಟ ಕನ್ನಡಿಗ ನವೀನ್ ಅವರ ಮೂರನೇ ದಿನದ ಕಾರ್ಯವನ್ನು ಅವರ ನಿವಾಸದಲ್ಲಿ ಕುಟುಂಬಸ್ಥರು ನೆರವೇರಿಸಿದರು.

preparation for funeral of naveen who died in Ukraine
ಉಕ್ರೇನ್​ನಲ್ಲಿ ಮೃತಪಟ್ಟ ನವೀನ್ ಅಂತಿಮ ವಿಧಿವಿಧಾನಕ್ಕೆ ಸಿದ್ಧತೆ

ಹಾವೇರಿ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಮೃತಪಟ್ಟ ಕನ್ನಡಿಗ ನವೀನ್ ಅವರ​ ಪಾರ್ಥೀವ ಶರೀರ ಬರೋದನ್ನು ಎದುರು ನೋಡುತ್ತಿದ್ದಾರೆ ಕುಟುಂಬಸ್ಥರು. ಪಾರ್ಥೀವ ಶರೀರ ಯಾವಾಗ ಬರುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಇಂದು ಪಾರ್ಥೀವ ಶರೀರ ಬರೋದರ ಬಗ್ಗೆ ಭಾರತೀಯ ರಾಯಭಾರಿ ಕಚೇರಿಯಿಂದ, ಭಾರತ ಸರ್ಕಾರದಿಂದ ಮಾಹಿತಿ ಸಿಗುವ ನಿರೀಕ್ಷೆಯಿದೆ ಎಂದು ಮೃತ ನವೀನ್​ ದೊಡ್ಡಪ್ಪ ಉಜ್ಜನಗೌಡ ಗ್ಯಾನಗೌಡರ ತಿಳಿಸಿದರು.

ಮೂರನೇ ದಿನದ ಕಾರ್ಯ ನೆರವೇರಿಸಿದ ಕುಟುಂಬಸ್ಥರು

ಸ್ವಾಮೀಜಿಗಳ ಹೇಳಿದಂತೆ ವೀರಶೈವ ಸಂಪ್ರದಾಯದಂತೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನವೀನ್​ ನಿವಾಸದ ಎದುರು ಮೂರು ದಿನದ ಕಾರ್ಯ‌ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿಲಾಯಿತು. ನವೀನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ವೇಳೆ ನವೀನ ನೆನೆದು ಕುಟುಂಬಸ್ಥರು ಕಣ್ಣೀರು ಹಾಕಿದರು.

ಇದನ್ನೂ ಓದಿ:ಉಕ್ರೇನ್​ನಲ್ಲಿ ಸಿಲುಕಿರುವ ತುಮಕೂರಿನ ವಿದ್ಯಾರ್ಥಿ.. ಕುಟುಂಬಸ್ಥರು ಹೇಳೋದೇನು?

ರಷ್ಯಾ-ಉಕ್ರೇನ್​ ನಡುವಿನ ಮಿಲಿಟರಿ ಸಂಘರ್ಷದಲ್ಲಿ ಮಂಗಳವಾರದಂದು ಮೃತಪಟ್ಟಿರುವ ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್​​ ಮೃತದೇಹವನ್ನು ಭಾರತಕ್ಕೆ ತರಲು ಅನೇಕ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

ಉಕ್ರೇನ್​ನಲ್ಲಿ ಮೃತಪಟ್ಟ ನವೀನ್ ಅಂತಿಮ ವಿಧಿವಿಧಾನಕ್ಕೆ ಸಿದ್ಧತೆ
Last Updated : Mar 3, 2022, 2:29 PM IST

ABOUT THE AUTHOR

...view details