ಕರ್ನಾಟಕ

karnataka

ETV Bharat / state

ಕೊರೊನಾ ಭೀತಿಗೆ ಕಷಾಯದ ಮೊರೆ ಹೋದ ಪೊಲೀಸ್​ ಸಿಬ್ಬಂದಿ - Corona Latest News

ಕೊರೊನಾ ಹರಡುವ ಭೀತಿಯಿಂದ ಪೊಲೀಸರೂ ಸಹ ಹೊರತಾಗಿಲ್ಲ. ಈಗಾಗಲೇ ಹಲವು ಸಿಬ್ಬಂದಿ ಕೂಡ ಸೋಂಕಿಗೆ ಒಳಗಾಗಿ, ಪೊಲೀಸ್ ಠಾಣೆಗಳೂ ಸೀಲ್​​ಡೌನ್​​ ಆಗಿವೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನಗರದ ಪೊಲೀಸರು ಕಷಾಯದ ಮೊರೆ ಹೋಗಿದ್ದಾರೆ.

Police personnels takes natural decoction for prevent coron in Haveri
ಕೊರೊನಾ ಭೀತಿಗೆ ಕಷಾಯದ ಮೊರೆ ಹೋದ ಪೊಲೀಸ್​ ಸಿಬ್ಬಂದಿ

By

Published : Jul 15, 2020, 7:58 PM IST

ರಾಣೆಬೆನ್ನೂರು (ಹಾವೇರಿ): ಸದಾ ಜನರ ರಕ್ಷಣೆಗೆ ನಿಂತಿರುವ ಪೊಲೀಸರಿಗೂ ಕೊರೊನಾ ಸೋಂಕು ದೃಢಪಟ್ಟು ಆತಂಕ ಸೃಷ್ಟಿಯಾಗಿದೆ.

ಈ ನಡುವೆ ರಾಣೆಬೆನ್ನೂರು ಪೊಲೀಸರು ಕೊರೊನಾಕ್ಕೆ ಸೆಡ್ಡು ಹೊಡೆದು ಠಾಣೆಯಲ್ಲಿ ಕಷಾಯ ಕುಡಿಯುವ ಮೂಲಕ ಮುಂಜಾಗೃತೆ ವಹಿಸುತ್ತಿದ್ದಾರೆ. ರಾಣೆಬೆನ್ನೂರು ಶಹರ ಪೊಲೀಸ್​​ ಠಾಣೆಯಲ್ಲಿ ಪ್ರತಿ ದಿನ ಮುಂಜಾನೆ ಮತ್ತು ಸಂಜೆ ಸಮಯದಲ್ಲಿ ಕಷಾಯ ಮಾಡಿಕೊಂಡ ಕುಡಿಯುತ್ತಿದ್ದಾರೆ.

ಕೊರೊನಾ ಭೀತಿಗೆ ಕಷಾಯದ ಮೊರೆ ಹೋದ ಪೊಲೀಸ್​ ಸಿಬ್ಬಂದಿ

ಕಷಾಯವನ್ನು ಸ್ವತಃ ಪೊಲೀಸ್​​​​ ಇಲಾಖೆಯ ಸಿಬ್ಬಂದಿ ಠಾಣೆಯಲ್ಲಿ ಮಾಡುತ್ತಿದ್ದು ಚಕ್ಕೆ, ಲವಂಗ, ಶುಂಠಿ, ಕಾಳುಮೆಣಸು, ಅಮೃತಬಳ್ಳಿ, ಬೆಳ್ಳುಳ್ಳಿ, ನಿಂಬೆಹಣ್ಣು ಮತ್ತು ತುಳಸಿದಳವನ್ನು ಬೆರೆಸಿ ತಯಾರಿಸುತ್ತಿದ್ದಾರೆ.

ABOUT THE AUTHOR

...view details