ಕರ್ನಾಟಕ

karnataka

ETV Bharat / state

ಮೊಬೈಲ್ ಸಂದೇಶಕ್ಕೆ ಮಾರಿಹೋಗಿ 37 ಲಕ್ಷ ಕಳೆದುಕೊಂಡ ಶಿಕ್ಷಕಿ...

ಬಹುಮಾನ ಬಂದಿರುವುದಾಗಿ ಮೊಬೈಲ್​ಗೆ ಬಂದ ಮೆಸೇಜ್​ ನಂಬಿ ಶಿಕ್ಷಿಕಿಯೊಬ್ಬಳು 37 ಲಕ್ಷ ಕಳೆದುಕೊಂಡಿದ್ದಾರೆ.

By

Published : Jun 25, 2020, 3:58 PM IST

cheating
ಮೊಬೈಲ್ ಸಂದೇಶಕ್ಕೆ ಮಾರಿಹೋಗಿ 37 ಲಕ್ಷ ಕಳೆದುಕೊಂಡ ಶಿಕ್ಷಕಿ

ಹಾವೇರಿ:ಸರ್ಕಾರ, ಬ್ಯಾಂಕುಗಳು, ಆರ್‌ಬಿಐ, ಪೊಲೀಸರು ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಎಷ್ಟೇ ಎಚ್ಚರಿಕೆಗಳನ್ನು ನೀಡಿದರು ಸಹ ಜನರು ಮಾತ್ರ ವಂಚಕರ ಮೋಸ ಜಾಲಕ್ಕೆ ಬಲಿಯಾಗಿ ಹಣವನ್ನು ಕಳೆದುಕೊಂಡ ಘಟನೆ ನಡೆದಿದೆ.

ರಾಣೆಬೆನ್ನೂರು ನಿವಾಸಿಯಾಗಿರುವ ಚಿಕ್ಕ ಮಾಗನೂರ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿರುವ ಸುಧಾ ಸುರೇಶ ಕಡೆಮನಿ ಇವರ ಮೊಬೈಲ್‌ಗೆ 4,80,00,0000/- ರೂಗಳ ಬಹುಮಾನ ಬಂದಿದೆ ಎಂದು ಯು.ಎಸ್.ಎ ದಿಂದ ಕರೆಮಾಡಿದ ಡಾ.ಥಾಮೋಸ್ ವಿಲಿಯಮ್ಸ್ ಮತ್ತು ಅಲೇಕ್ಷಾಂಡರ್ ಜೈನ ಇಬ್ಬರೂ ವಾಟ್ಸಪ್ ಗ್ಲೋಬಲ್ ಅವಾರ್ಡ್ ಕಂಪನಿಯಿಂದ ಬಹುಮಾನ ಬಂದಿದೆ ಎಂದು ಟೆಕ್ಟ್​ ಮೆಸೇಜ್​ ಮಾಡಿದ್ದಾರೆ. ಈ ವಂಚಕರ ಮಾತುಗಳನ್ನು ಶಿಕ್ಷಕಿ ನಂಬಿದ್ದಾರೆ.

ಮೊಬೈಲ್ ಸಂದೇಶಕ್ಕೆ ಮಾರಿಹೋಗಿ 37 ಲಕ್ಷ ಕಳೆದುಕೊಂಡ ಶಿಕ್ಷಕಿ

ಮತ್ತು ಪಿರ್ಯಾದಿದಾರರ ವ್ಯಯಕ್ತಿಕ ಮಾಹಿತಿಯನ್ನು ಪಡೆದುಕೊಂಡು ಪಿರ್ಯಾದಿದಾರರಿಗೆ ನಂಬಿಕೆ ಬರುವಂತೆ ಹಲವು ಬಾರಿ ಮೇಲ್‌ಗಳನ್ನು ಪಿರ್ಯಾದಿದಾರರ ಮೇಲ್‌ಗೆ ಕಳಿಸಿ ಅವರ ಜೊತೆಗೆ ಪೋನ್‌ನಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡಿ ಯು.ಎಸ್.ಎ ಡಾಲರನ್ನು ರೂಪಾಯಿಯಲ್ಲಿ ವಿನಿಮಯ ಮಾಡಿ ಪಿರ್ಯಾದಿದಾರರ ಬ್ಯಾಂಕ್ ಖಾತೆಗೆ ಹಾಕಲು ಹಲವು ಸರ್ವಿಸ್ ಚಾರ್ಜ್​ಗಳನ್ನು ಕಟ್ಟಬೇಕು ಎಂದು ನಂಬಿಸಿ ಶಿಕ್ಷಕಿಯಿಂದ ತಮ್ಮ ವಿವಿಧ ಬ್ಯಾಂಕ್​ ಖಾತೆಗಳಿಗೆ ಸುಮಾರು ಒಟ್ಟು 37,14,600/- ರೂ ಗಳನ್ನು ಹಾಕಿಸಿಕೊಂಡು ವಂಚಿಸಿದ್ದಾರೆ.

ವಂಚಕರ ಮೋಸಕ್ಕೆ ಬಲಿಯಾಗಿ ಲಕ್ಷಾಂತರೂಗಳನ್ನು ಕಳೆದುಕೊಂಡ ಶಿಕ್ಷಕಿ ಈ ಬಗ್ಗೆ ಸಿ.ಇ.ಎನ್.ಕ್ರೈಂ ಹಾವೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details