ಕರ್ನಾಟಕ

karnataka

ETV Bharat / state

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕೊರೊನಾ: ಮುಂಜಾಗ್ರತಾ ಕ್ರಮಕ್ಕೆ ಒತ್ತಾಯ - corona Increase in rural areas

ತಾಲೂಕು ಕೇಂದ್ರಗಳಿಂದ ಗ್ರಾಮಗಳಿಗೆ ಕೊರೊನಾ ಸೋಂಕು ಹರಡುತ್ತಿರುವುದರಿಂದ ಆತಂಕಗೊಂಡ ಹಾವೇರಿ ಗ್ರಾಮಸ್ಥರು ಕೊರೊನಾ ಹರಡುವಿಕೆ ತಡೆಯುವಲ್ಲಿ ಜಿಲ್ಲಾಡಳಿತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Haveri
ಕೊರೊನಾ ನಿಯಂತ್ರಣಕ್ಕೆ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ

By

Published : Jun 27, 2020, 8:41 AM IST

Updated : Jun 27, 2020, 9:52 AM IST

ಹಾವೇರಿ: ಆರಂಭದಲ್ಲಿ ಜಿಲ್ಲೆಯ 2 ತಾಲೂಕುಗಳಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಇದೀಗ 6 ತಾಲೂಕುಗಳಿಗೆ ವ್ಯಾಪಿಸಿದೆ. ತಾಲೂಕು ಕೇಂದ್ರಗಳಿಂದ ಗ್ರಾಮಗಳಿಗೆ ಕೊರೊನಾ ಸೋಂಕು ಹರಡುತ್ತಿರುವುದರಿಂದ ಆತಂಕಗೊಂಡ ಗ್ರಾಮಸ್ಥರು ಕೊರೊನಾ ಹರಡುವಿಕೆ ತಡೆಯುವಲ್ಲಿ ಜಿಲ್ಲಾಡಳಿತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ

ಮೊದಲು ಸವಣೂರು ತಾಲೂಕಿನಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ನಂತರ ಶಿಗ್ಗಾವಿ, ಹಾವೇರಿ, ಬ್ಯಾಡಗಿ, ರಾಣೇಬೆನ್ನೂರು ಹಾಗೂ ಹಾನಗಲ್‌ ತಾಲೂಕಿಗೂ ಕಾಲಿಟ್ಟಿದೆ. ಜಿಲ್ಲೆಯ ಒಟ್ಟು 8 ತಾಲೂಕುಗಳಲ್ಲಿ 6 ತಾಲೂಕುಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಜೂ. 25 ರಂದು ಒಂದೇ ದಿನ ಜಿಲ್ಲೆಯಲ್ಲಿ 10 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇವರಲ್ಲಿ ಸವಣೂರಿನ ಗರ್ಭಿಣಿಯಿಂದ 6 ಜನರಿಗೆ ಮತ್ತು ಹಾನಗಲ್ ತಾಲೂಕಿನ ಕುಂಟನಹೊಸಳ್ಳಿಯಲ್ಲಿ ಒಬ್ಬರಿಗೆ, ಆಶಾ ಕಾರ್ಯಕರ್ತೆಯಿಂದ ಸವಣೂರಿನ ಸ್ಟಾಫ್ ನರ್ಸ್​ಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಉಳಿದಂತೆ ಇನ್ನಿಬ್ಬರ ಟ್ರಾವೆಲ್ ಹಿಸ್ಟರಿ ಪತ್ತೆಗೆ ಜಿಲ್ಲಾಡಳಿತ ಮುಂದಾಗಿದೆ.

ಇನ್ನು ಜೂ.26ರಂದು 2 ಪ್ರಕರಣಗಳು ದೃಢಪಟ್ಟಿದೆ. ಶಿಗ್ಗಾವಿ ಪಟ್ಟಣದ ಒಬ್ಬರಿಗೆ ಹಾಗೂ ಸವಣೂರು ತಾಲೂಕಿನ ಶಿರಬಡಗಿ ಕಾನ್​ಸ್ಟೇಬಲ್​ಗೆ‌ ಸೋಂಕು ದೃಢಪಟ್ಟಿದೆ. ಆರಂಭದಲ್ಲಿ ಬೆರಳೆಣಿಕೆಯಷ್ಟಿದ್ದ ಸೋಂಕಿತರ ಸಂಖ್ಯೆ ಇದೀಗ 56ಕ್ಕೆ ಏರಿದ್ದು, 200ಕ್ಕೂ ಅಧಿಕ ಗಂಟಲು ದ್ರವಗಳ ಫಲಿತಾಂಶ ಬರಬೇಕಿದೆ. ಹಾಗಾಗಿ ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕೆಂದು, ಸಾರ್ವಜನಿಕರು ಒತ್ತಾಯಿಸಿದ್ದಾರೆ.

Last Updated : Jun 27, 2020, 9:52 AM IST

ABOUT THE AUTHOR

...view details