ಹಾವೇರಿ: ಸಚಿವ ಸಂಪುಟ ವಿಸ್ತರಣೆ ವೇಳೆ ನನಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ ಎಂದು ಹಾವೇರಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಸಿಎಂ ಮತ್ತು ಹೈಕಮಾಂಡ್ ತಮಗೆ ಅವಕಾಶ ನೀಡುವ ವಿಚಾರದಲ್ಲಿದ್ದಾರೆ. ಎಲ್ಲ ಸಮುದಾಯಗಳನ್ನು ಒಟ್ಟಾಗಿ ಒಯ್ಯಲು ನನಗೆ ಸಚಿವ ಸ್ಥಾನ ನೀಡಿ ಎಂದು ಓಲೇಕಾರ್ ತಿಳಿಸಿದ್ದಾರೆ. ಆದರೆ ಸಚಿವ ಸ್ಥಾನಕ್ಕಾಗಿ ನಾನು ಪಟ್ಟು ಹಿಡಿಯುವುದಿಲ್ಲ ರಾಜೀನಾಮೆ ನೀಡುವುದಿಲ್ಲ ಎಂದು ಓಲೇಕಾರ್ ತಿಳಿಸಿದ್ದಾರೆ.
ನನಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ- ನೆಹರು ಓಲೇಕಾರ್ ಸಚಿವ ಸಂಪುಟದಲ್ಲಿ ಸಮತೋಲನ ಕಾಪಾಡಲು ನನಗೆ ಸಚಿವ ಸ್ಥಾನ ನೀಡಿ. ಸಚಿವ ಸ್ಥಾನ ನೀಡಿದ್ರೂ ಓಕೆ ನೀಡದಿದ್ದರೂ ಓಕೆ. ಸಚಿವ ಸ್ಥಾನಕ್ಕೆ ನಾನು ಪಟ್ಟು ಹಿಡಿಯುವುದಿಲ್ಲ. ಆದರೆ ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದಾರೆ ಎಂದರು.
ಆರ್. ಶಂಕರ್ ಸೇರಿದಂತೆ ಸೋತ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ನೀಡಬಹುದು. ಸಚಿವ ಸ್ಥಾನ ಸಿಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂಬ ಧೋರಣೆ ಸರಿಯಲ್ಲ ಎಂದರು.