ಕರ್ನಾಟಕ

karnataka

ETV Bharat / state

ಹಾವೇರಿ: ಪತ್ನಿಕೊಂದು ನೇಣಿಗೆ ಆತ್ಮಹತ್ಯೆ ಮಾಡಿಕೊಂಡ ಪತಿ - ಈಟಿವಿ ಭಾರತ ಕನ್ನಡ

ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಪತಿ, ಪತ್ನಿಯನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಪತ್ನಿಯ ಕೊಂದು ನೇಣಿಗೆ ಶರಣಾದ ಪತಿ
ಪತ್ನಿಯ ಕೊಂದು ನೇಣಿಗೆ ಶರಣಾದ ಪತಿ

By

Published : Jun 7, 2023, 11:21 AM IST

ಹಾವೇರಿ: ಹೆಂಡತಿಯ ಕೊಲೆ ಮಾಡಿ ಪತಿ ನೇಣಿಗೆ ಶರಣಾದ ಘಟನೆ ಹಾವೇರಿ ತಾಲೂಕು ಸಂಗೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನ 45 ವರ್ಷದ ದ್ರಾಕ್ಷಾಣೆವ್ವ ಮತ್ತು 52 ವರ್ಷದ ಪ್ರಭು ವಾರತಿ ಎಂದು ಗುರುತಿಸಲಾಗಿದೆ. ಪತಿ ಪ್ರಭು ಪತ್ನಿ ಮೇಲೆ ಪ್ರತಿನಿತ್ಯ ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಇದರಿಂದ ನಿತ್ಯ ಪತಿ - ಪತ್ನಿ ಮನೆಯಲ್ಲಿ ಜಗಳ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಮಂಗಳವಾರ ರಾತ್ರಿ ಜಗಳ ಅತಿರೇಕಕ್ಕೆ ಹೋಗಿ ಇಬ್ಬರು ಹೊಡೆದಾಡಿಕೊಂಡಿದ್ದರು ಎನ್ನಲಾಗಿದೆ. ಬಳಿಕ ಮಾರಕಾಸ್ತ್ರದಿಂದ ಹೆಂಡತಿಯನ್ನ ಪ್ರಭು ಹೊಡೆದು ಕೊಲೆ ಮಾಡಿ ನಂತರ ತಾನು ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಎಸ್ಪಿ ಶಿವಕುಮಾರ್ ಗುಣಾರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾವೇರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅಣ್ಣನ ಪ್ರೀತಿಸಿದ ಹುಡುಗಿ ಮನೆಕಡೆಯಿಂದ ಕಿರುಕುಳ ತಮ್ಮ ಆತ್ಮಹತ್ಯೆ:ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆಯೊಂದರಲ್ಲಿ ಅಣ್ಣನನ್ನು ಪ್ರೀತಿಸಿದ ಹುಡುಗಿ ಕಡೆಯವರ ಕಿರುಕುಳದಿಂದ ಬೇಸತ್ತು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಎಂಬಲ್ಲಿ ನಡೆದಿತ್ತು. ಸುರೇಶ ನಾಯ್ಕ ಮೃತ ಯುವಕ ಎಂದು ಗುರುತಿಸಲಾಗಿದೆ.

ಸುರೇಶ್ ನಾಯ್ಕ ಸಹೋದರನಾದ ಮಂಜು ನಾಯ್ಕ ಹಾವೇರಿ ಜಿಲ್ಲೆಯ ಯುವತಿಯನ್ನ 8 ವರ್ಷದಿಂದ ಪ್ರೀತಿಸುತ್ತಿದ್ದ. ಯುವತಿ ಕೂಡ ಮಂಜುನನ್ನು ಪ್ರೀತಿಸುತ್ತಿದ್ದಳಂತೆ. ಯುವತಿಯು, ತನಗೆ ಸರ್ಕಾರಿ ನೌಕರಿ ಸಿಗಲಿದೆ ಎಂದು ಪ್ರಿಯಕರ ಮಂಜು ಬಳಿ ಹಣ ಬೇಕು ಕೇಳಿದ್ದಾಳೆ. ಮಂಜು 4 ಲಕ್ಷ ರೂಪಾಯಿ ಹಣದ ಜೊತೆ ಒಡವೆಗಳನ್ನು ನೀಡಿದ್ದಾನೆ. ಆದರೆ ಯುವತಿ 8 ವರ್ಷದ ಪ್ರೀತಿ ಮರೆತು ಬೇರೆ ಯುವಕನೊಂದಿಗೆ ಮದುವೆಗೆ ಸಿದ್ದಳಾಗಿದ್ದಾಳೆ.

ವಿಷಯ ತಿಳಿದ ಮಂಜು ನಾಯ್ಕ್​ ತನಗೆ ಪ್ರೀತಿಸಿದ ಯುವತಿ ಮೋಸ ಮಾಡಿದ್ದಾಳೆ ಎಂದು ಕೆರಳಿ, ತನ್ನ ಮತ್ತು ಯುವತಿಯ ಖಾಸಗಿ ವಿಡಿಯೋಗಳನ್ನು ಆಕೆಯ ಸಹೋದರನಿಗೆ ತೋರಿಸಿದ್ದ. ಅಲ್ಲದೇ ಇದನ್ನು ಇಟ್ಟುಕೊಂಡು ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಮಂಜು ನಾಯ್ಕ್​ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ನಂತರ ಬೇರೆ ಯುವಕನೊಂದಿಗೆ ಯುವತಿಯ ಮದುವೆ ನಡೆಸಿದ್ದರು. ನಂತರ ಮಂಜು ತಮ್ಮ ಸುರೇಶ್​ ನಾಯ್ಕ್​​ಗೆ ಯುವತಿ ಕುಟುಂಬದವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಂಸಿಸಿದ್ದಾರೆ ಎಂದು ಸುರೇಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಸುರೇಶ್​ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ.

ತಾಯಿ ಕೆಲಸಕ್ಕೆ ಹೋದಾಗ ಸಹೋದರಿಯರ ಆತ್ಮಹತ್ಯೆ, ಹುಬ್ಬಳ್ಳಿ :ಸಹೋದರಿಯರಿಬ್ಬರುನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಏ.4ರಂದು ನಡೆದಿತ್ತು. ಭೂಮಿಕಾ ಹಡಪದ (19) ಮತ್ತು ಕಾವೇರಿ ಹಡಪದ (17) ಆತ್ಮಹತ್ಯೆಗೆ ಶರಣಾದ ಸಹೋದರಿಯರು ಎಂದು ಗುರುತಿಸಲಾಗಿತ್ತು. ಮನೆಯಲ್ಲಿ ತಾಯಿ ಇಲ್ಲದ ವೇಳೆ ಇಬ್ಬರು ನೇಣಿಗೆ ಶರಣಾಗಿದ್ದರು.

ಇದನ್ನೂ ಓದಿ:ಪೋಷಕರು ಮದುವೆಗೆ ಒಪ್ಪದ ಕಾರಣ ಪ್ರೇಮಿಗಳು ಬಸ್​ನಲ್ಲಿ​ ಆತ್ಮಹತ್ಯೆಗೆ ಯತ್ನ.. ಯುವತಿ ಸಾವು

ABOUT THE AUTHOR

...view details