ಕರ್ನಾಟಕ

karnataka

ETV Bharat / state

ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಲು 60 ಶಾಸಕರ ಸಮ್ಮತಿ : ನೆಹರು ಓಲೇಕಾರ್ - ಬಿಜೆಪಿಯಲ್ಲಿ ಗೊಂದಲ

ಸಿಎಂ ಬಿ ಎಸ್‌ ಯಡಿಯೂರಪ್ಪ ಇನ್ನೂ ಎರಡು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿ. ಎರಡು ವರ್ಷದ ನಂತರ ಬದಲಾವಣೆ ಬಯಸಿದರೆ ಬದಲಾವಣೆ ಮಾಡಬಹುದು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ಗೆ ತಿಳಿಸಿರುವೆ..

nehru-olekar
ನೆಹರು ಓಲೇಕಾರ್

By

Published : Jun 18, 2021, 5:12 PM IST

ಹಾವೇರಿ :ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಲು 60 ಶಾಸಕರ ಸಮ್ಮತಿ ಇದೆ ಎಂದು ಬಿಜೆಪಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಒಬ್ಬೊಬ್ಬ ಶಾಸಕರಿಗೆ ಪಾಲ್ಗೊಳ್ಳುವ ಅವಕಾಶವಿದ್ದಿದ್ದರಿಂದ ನಾನು ವೈಯಕ್ತಿಕವಾಗಿ ಅರುಣ್​ ಸಿಂಗ್​ ಭೇಟಿ ಮಾಡಿ ಅರುಣ್​ ಸಿಂಗ್​ ಮುಂದೆ ತಮ್ಮ ಅಹವಾಲುಗಳನ್ನು ಹೇಳಿಕೊಂಡಿದ್ದೆ ಎಂದಿದ್ದಾರೆ.

ನಾಯಕತ್ವ ಬದಲಾವಣೆ ಕುರಿತಂತೆ ಶಾಸಕ ನೆಹರು ಓಲೇಕಾರ್ ಪ್ರತಿಕ್ರಿಯೆ..

ಮುಖ್ಯಮಂತ್ರಿ ಬದಲಾವಣೆ ಮಾಡುವ ಕುರಿತಂತೆ ಐದಾರು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಲ್ಲದ್​,ಯತ್ನಾಳ್, ಮುರುಗೇಶ್ ನಿರಾಣಿ, ಸಿ ಪಿ ಯೋಗೇಶ್ವರ್​ ಸೇರಿದಂತೆ ಐದಾರು ಜನ ಸಿಎಂ ಬದಲಾವಣೆಯ ಪ್ರಸ್ತಾಪ ಮಾಡಿದ್ದಾರೆ. ಆದರೆ, ಅರುಣ್​ ಸಿಂಗ್ ಈ ಕುರಿತಂತೆ ಏನೂ ಹೇಳಿಲ್ಲ.

ನಮ್ಮೆಲ್ಲರ ಅಭಿಪ್ರಾಯ ಪಡೆದಿರುವ ಅರುಣ್​ ಸಿಂಗ್​, ದೆಹಲಿಗೆ ತೆರಳಿ ವರಿಷ್ಠರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಆ ಮೇಲೆ ನಾಯಕತ್ವ ಬದಲಾವಣೆ ಕುರಿತಂತೆ ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ ಎಂದು ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.

ಓದಿ:ಬಿಜೆಪಿ ಕೋರ್ ಕಮಿಟಿ ಸಭೆ ಆರಂಭ.. ನಾಯಕತ್ವ ಗೊಂದಲಕ್ಕೆ ಬೀಳುತ್ತಾ ಬ್ರೇಕ್..?

ABOUT THE AUTHOR

...view details