ಕರ್ನಾಟಕ

karnataka

ETV Bharat / state

ಲಾಕ್​ಡೌನ್ ವಿಸ್ತರಣೆ ಬಗ್ಗೆ ಜೂ.5 ರಂದು ಸಿಎಂ ತೀರ್ಮಾನ: ಗೃಹ ಸಚಿವ ಬೊಮ್ಮಾಯಿ - ಗೃಹ ಸಚಿವ ಬೊಮ್ಮಾಯಿ

ಎಲ್ಲೂ ಕೂಡ ಗೊಬ್ಬರದ ಕೊರತೆಯಿಲ್ಲ. ಉದ್ದೇಶಪೂರ್ವಕವಾಗಿ ಗೊಬ್ಬರದ ಅಭಾವ ಸೃಷ್ಟಿಸಲು ಎಲ್ಲಿಯಾದರೂ ಗೊಬ್ಬರ ಸಂಗ್ರಹ ಮಾಡಿಟ್ಟಿದ್ದರೆ ರೇಡ್ ಮಾಡಲು ಹೇಳಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಗೃಹ ಸಚಿವ ಬೊಮ್ಮಾಯಿ
ಗೃಹ ಸಚಿವ ಬೊಮ್ಮಾಯಿ

By

Published : Jun 2, 2021, 4:49 PM IST

Updated : Jun 2, 2021, 7:41 PM IST

ಹಾವೇರಿ: ಜೂನ್ 4ರಂದು ಸಿಎಂ ಬೆಳಗಾವಿಯಲ್ಲಿ ಸಭೆ ಮಾಡ್ತಿದ್ದಾರೆ‌. ಹಲವು ಜಿಲ್ಲೆಗಳಲ್ಲಿ ಸೋಂಕು ಕಡಿಮೆ ಆಗಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಕಡಿಮೆ ಆಗಬೇಕಿದೆ. ಎಲ್ಲವನ್ನೂ ಗಮನಿಸ್ತಾ ಇದ್ದೇವೆ. ಸಭೆ ಪೂರ್ವದಲ್ಲಿ ತಜ್ಞರ ವರದಿಯನ್ನ ಸಂಪೂರ್ಣವಾಗಿ ತಿಳಿದುಕೊಂಡು ಸಿಎಂ ಅವರು ಲಾಕ್​​ಡೌನ್ ವಿಸ್ತರಣೆ ಬಗ್ಗೆ ತೀರ್ಮಾನ ಮಾಡ್ತಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಸಚಿವರು ಹೇಳಿಕೆ ನೀಡಿದರು. ಲಾಕ್​ಡೌನ್ ಯಾವ ರೀತಿ ಇರಬೇಕು, ಹೇಗೆ ಇರಬೇಕು ಎಂಬುದರ ಬಗ್ಗೆ ಜೂನ್ 5ರಂದು ಸಿಎಂ ತೀರ್ಮಾನ ಮಾಡ್ತಾರೆ. ಮೂರನೆ ಅಲೆ ಎದುರಿಸಲು ಈಗಾಗಲೇ ಸರ್ಕಾರ ಸಜ್ಜಾಗ್ತಿದೆ. ಆಕ್ಸಿಜನ್ ಬೆಡ್​​​ಗಳು, ವೆಂಟಿಲೇಟರ್, ಐಸಿಯು ಹೆಚ್ಚು ಮಾಡ್ತಿದ್ದೇವೆ. ಪ್ರತಿಯೊಂದು ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಜನರೇಟರ್ ಮಾಡಬೇಕು ಅಂತಾ ನಿರ್ಧರಿಸಿ ಅದಕ್ಕೆ ಕ್ರಮ ತೆಗೆದುಕೊಳ್ತಿದ್ದೇವೆ. ಪ್ರತಿಯೊಂದು ತಾಲೂಕು ಅಸ್ಪತ್ರೆ ಮತ್ತು ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಜನರೇಟರ್ ಬಂದರೆ ಆಕ್ಸಿಜನ್ ಸಮಸ್ಯೆ ನೀಗುತ್ತದೆ. ಅಗತ್ಯಕ್ಕೆ ತಕ್ಕಂತೆ ರೆಮ್​​ಡಿಸಿವಿರ್ ಇದೆ. ಮೂರನೆ ಅಲೆ ಹೆಚ್ಚಾಗಿ ಮಕ್ಕಳಿಗೆ ಬರೋದ್ರಿಂದ ಪ್ರತಿಯೊಂದು ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಪ್ರತ್ಯೇಕ ಮಕ್ಕಳ ವಾರ್ಡ್ ಮಾಡ್ತಿದ್ದೇವೆ ಎಂದು ಹೇಳಿದರು.

ಗೃಹ ಸಚಿವ ಬೊಮ್ಮಾಯಿ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ

ಸಿಬಿಎಸ್ಸಿ, ಐಸಿಎಸ್ಸಿ ಪರೀಕ್ಷೆ ಮುಂದೆ ಹೋಗಿದೆ. ಅಲ್ಲಿಯ ವ್ಯವಸ್ಥೆಯಂತೆ ರಾಜ್ಯಮಟ್ಟದ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಇಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಶಿಕ್ಷಣ ಸಚಿವ ಸುರೇಶಕುಮಾರ ಅವರು ತಜ್ಞರ ಜೊತೆ ಚರ್ಚೆ ಮಾಡ್ತಿದ್ದಾರೆ. ನಾಳೆ ಅಥವಾ ನಾಡಿದ್ದು ಯಾವ ರೀತಿ ಇರಬೇಕು ಅಂತಾ ಶಿಕ್ಷಣ ಸಚಿವರು ನಿರ್ಧಾರ ಮಾಡ್ತಾರೆ.

ಲಾಕ್​ಡೌನ್​ ವಿಸ್ತರಣೆಗೆ ಬಿ.ಸಿ.ಪಾಟೀಲ ಒಲವು:

ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡುವುದು ಒಳ್ಳೆಯದು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಕೊಪ್ಪಳ, ಹಿರೇಕೆರೂರು ಸೇರಿದಂತೆ ಹಲವೆಡೆ ಓಡಾಡಿದ್ದೇನೆ. ಹಿರೇಕರೂರಲ್ಲಿ ಡೆತ್ ರೇಟ್ ಜಾಸ್ತಿ ಇದೆ. ಇದರಿಂದ ಇನ್ನೊಂದು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡೋದು ಒಳ್ಳೆಯದು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಕೊರೊನಾದಲ್ಲಿ ರಾಜಕೀಯ ಮಾಡಲು ಹೊರಟಿರೋದು ಸರಿಯಲ್ಲ. ಇದು ರಾಜಕಾರಣ ಮಾಡೋ ಸಮಯವಲ್ಲ. ರೋಮ್ ಹೊತ್ತಿ ಉರಿವಾಗ ನೀರೋ ಪಿಟೀಲು ಬಾರಿಸಿದಂತೆ ಡಿಕೆಶಿ ಮಾಡ್ತಿದ್ದಾರೆ ಎಂದು ದೂರಿದರು.

ನಾನು ರೀಲಲ್ಲಿ ಹೀರೋ, ರೀಯಲ್ ಆಗಿ ಹೀರೋ ಅಂತಾ ಸಿ.ಪಿ.ಯೋಗೇಶ್ವರ ಹೇಳಿದ್ದಾರೆ. ನಾನೂ ಅದನ್ನೆ ಹೇಳುತ್ತೇನೆ. ಇದು ರಾಜಕಾರಣದ ಬಗ್ಗೆ ಮಾತನಾಡೋ ಸಮಯವಲ್ಲ. ಅದನ್ನ ನೋಡಿಕೊಳ್ಳೋಕೆ ರಾಜ್ಯದ ನಾಯಕರಿದ್ದಾರೆ. ಕೊರೊನಾದಿಂದ ಜನರು ಸಾಯ್ತಿದ್ದಾರೆ. ಬ್ಲಾಕ್ ಫಂಗಸ್ ಹರಡ್ತಿದೆ. ಈ ಟೈಮ್ ರಾಜಕಾರಣ ಮಾಡೋದು ಅಲ್ಲ. ಧಾರವಾಡದಲ್ಲೂ ಡಿಎಪಿ ಇವತ್ತು ನಾಳೆ ಬರ್ತಾ ಇದೆ. 1600 ಮೆಟ್ರಿಕ್ ಟನ್ ಬರ್ತಾ ಇದೆ.

ಎಲ್ಲೂ ಕೂಡ ಗೊಬ್ಬರದ ಕೊರತೆಯಿಲ್ಲ. ಉದ್ದೇಶಪೂರ್ವಕವಾಗಿ ಗೊಬ್ಬರದ ಅಭಾವ ಸೃಷ್ಟಿಸಲು ಎಲ್ಲಿಯಾದರು ಗೊಬ್ಬರ ಸಂಗ್ರಹ ಮಾಡಿಟ್ಟಿದ್ದರೆ ರೇಡ್ ಮಾಡಲು ಹೇಳಿದ್ದೇನೆ. ಕೊರೊನಾ ಜಗತ್ತಿಗೆ ಬಂದಿರೋ ಕಷ್ಟ. ರೈತರು ಬೆಳೆದ ಬೆಳೆಯನ್ನ ನಾಶ ಮಾಡಬಾರ್ದು. ಬೆಳೆ ನಾಶ ಮಾಡಿದ ತಕ್ಷಣ ಪರಿಹಾರ ಬರೋದಿಲ್ಲ ಎಂದರು.

Last Updated : Jun 2, 2021, 7:41 PM IST

ABOUT THE AUTHOR

...view details