ಹಾವೇರಿ:ಮಠದ ಮುಂದೆ ಟ್ರ್ಯಾಕ್ಟರ್‌ನಲ್ಲಿ ಸಂಚರಿಸುವಾಗ ಹೆಚ್ಚು ಸೌಂಡ್ ಇಟ್ಟುಕೊಂಡು ಹೋಗಬೇಡಿ ಎಂದಿದ್ದಕ್ಕೆ ಸ್ವಾಮೀಜಿ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕೃಷ್ಣಾಪುರದಲ್ಲಿ ನಡೆದಿದೆ. ಕೃಷ್ಣಾಪುರ ಗ್ರಾಮದಲ್ಲಿರುವ ಬಂಜಾರ ಗುರುಪೀಠದ ಕುಮಾರ ಮಹಾರಾಜ ಸ್ವಾಮೀಜಿ ಹಲ್ಲೆಗೊಳಗಾದವರು.
'ಪೂಜೆಗೆ ತೊಂದರೆ ಆಗ್ತಿದೆ, ಸೌಂಡ್ ಕಡಿಮೆ ಮಾಡಿ' ಎಂದಿದ್ದಕ್ಕೆ ಸ್ವಾಮೀಜಿ ಮೇಲೆ ಹಲ್ಲೆ - ಹಾವೇರಿ ಅಪರಾಧ ಸುದ್ದಿ
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕೃಷ್ಣಾಪುರದ ಬಂಜಾರಪೀಠದ ಸ್ವಾಮೀಜಿ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಸ್ವಾಮೀಜಿ ಹೇಳಿಕೆ
ಸವಣೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಸ್ವಾಮೀಜಿ ದೂರು ದಾಖಲಿಸಿದ್ದಾರೆ. ಗುರುಪೀಠದ ಮುಂದೆ ಹೋಗುತ್ತಿದ್ದಾಗ ಟ್ರ್ಯಾಕ್ಟರ್‌ನಲ್ಲಿ ಸ್ಪೀಕರ್ ಸೌಂಡ್ ಕಡಿಮೆ ಇಟ್ಟುಕೊಂಡು ಹೋಗುವಂತೆ ತಿಳಿ ಹೇಳಿದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದರು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಸನ್ಯಾಸತ್ವ ಸ್ವೀಕರಿಸಿದ ಮಾಜಿ ಸಚಿವ.. ಬಿ.ಜೆ. ಪುಟ್ಟಸ್ವಾಮಿ ಇನ್ಮುಂದೆ ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿ